ಸ್ನ್ಯಾಕ್ ಆಗಿ ಸವಿಯಬಹುದಾದ ಒಂದು ರುಚಿಕರವಾದ ಮತ್ತು ಸುಲಭವಾಗಿ ತಯಾರಿಸಬಹುದಾದ ರೆಸಿಪಿಯೆಂದರೆ ಬ್ರೆಡ್ ರೋಲ್. ಈ ಬ್ರೆಡ್ ರೋಲ್ ಗಳು ಹೊರಗೆ ಕ್ರಿಸ್ಪಿಯಾಗಿ ಹಾಗೂ ಒಳಗೆ ಸಾಫ್ಟ್ ಆಗಿದ್ದು ಎಲ್ಲರಿಗೂ ಇಷ್ಟವಾಗುವ ತಿಂಡಿ. ಇದನ್ನು ಮಾಡೋದು ಹೇಗೆ ಅಂತ ನೋಡೋಣ.
ಬೇಕಾಗುವ ಪದಾರ್ಥಗಳು:
ಬ್ರೆಡ್ – 8 ತುಂಡು
ಬೇಯಿಸಿ ಮ್ಯಾಷ್ ಮಾಡಿದ ಬಟಾಟೆ – 3
ಹಸಿಮೆಣಸು – 2 (ಸಣ್ಣದಾಗಿ ಕತ್ತರಿಸಬೇಕು)
ಶುಂಠಿ ಪುಡಿ – ½ ಚಮಚ
ಜೀರಿಗೆ – ½ ಚಮಚ
ಹಾಲು – ¼ ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ – ಕರಿಯಲು
ತಯಾರಿಸುವ ವಿಧಾನ:
ಮೊದಲು ಬೇಯಿಸಿ ಮ್ಯಾಷ್ ಮಾಡಿದ ಬಟಾಟೆಗೆ ಹಸಿಮೆಣಸು, ಶುಂಠಿ ಪುಡಿ, ಜೀರಿಗೆ, ಕೊತ್ತಂಬರಿ ಸೊಪ್ಪು, ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಬ್ರೆಡ್ ಸ್ಲೈಸ್ ಗಳ ತುದಿಗಳನ್ನು ಕತ್ತರಿಸಿ, ಲಟ್ಟಣಿಗೆಯಿಂದ ಸ್ವಲ್ಪ ಲಟ್ಟಿಸಿಕೊಳ್ಳಿ. ನಂತರ ಇದನ್ನು ಹಾಲಿನಲ್ಲಿ ಡಿಪ್ ಮಾಡಿ ಒಂದು ಪ್ಲೇಟ್ ನಲ್ಲಿಟ್ಟು ಅದಕ್ಕೆ ಸಿದ್ಧಪಡಿಸಿದ ಬಟಾಟೆ ಮಿಶ್ರಣವನ್ನು ಇಟ್ಟು, ರೋಲ್ ಮಾಡಿ.
ಎಲ್ಲ ರೋಲ್ ಗಳನ್ನು ಹೀಗೆ ತಯಾರಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ರೋಲ್‌ಗಳನ್ನು ಮಧ್ಯಮ ಉರಿಯ ಮೇಲೆ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿದರೆ ಕ್ರಿಸ್ಪಿ ಬ್ರೆಡ್ ರೋಲ್ ರೆಡಿ.