April 10, 2026
Friday, April 10, 2026
spot_img

FOOD | ಕ್ರಿಸ್ಪಿ & ಟೇಸ್ಟಿ ಸ್ನ್ಯಾಕ್ ಚೀಸ್ ಕಬಾಬ್: ಬಾಯಲ್ಲಿಟ್ರೆ ಕರಗಿ ಹೋಗುತ್ತೆ

ಸಂಜೆಯ ವೇಳೆಗೆ ಬಿಸಿ ಬಿಸಿ ಚಹಾ ಜೊತೆ ಏನಾದರೂ ಕ್ರಿಸ್ಪಿ ಸ್ನ್ಯಾಕ್ ತಿನ್ಬೇಕು ಅಂದಾಗ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಚೀಸ್ ಕಬಾಬ್. ಕಡಿಮೆ ಸಮಯದಲ್ಲಿ, ಸರಳ ಪದಾರ್ಥಗಳಿಂದ ತಯಾರಿಸಬಹುದಾದ ಈ ಟೇಸ್ಟಿ ಸ್ನ್ಯಾಕ್ ನಿಮ್ಮ ಮನೆಮಂದಿಗೆ ಖಂಡಿತ ಇಷ್ಟವಾಗುತ್ತೆ.

ಬೇಕಾಗುವ ಸಾಮಗ್ರಿಗಳು:

ತುರಿದ ಚೀಸ್ – 1 ಕಪ್
ಬೇಯಿಸಿದ ಆಲೂಗಡ್ಡೆ – 2 (ಮ್ಯಾಶ್ ಮಾಡಿದದ್ದು)
ಕಾರ್ನ್ – ¼ ಕಪ್
ಬ್ರೆಡ್ ಕ್ರಂಬ್ಸ್ – ½ ಕಪ್
ಹಸಿಮೆಣಸು – 1
ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಮೆಣಸಿನಪುಡಿ – ½ ಟೀ ಸ್ಪೂನ್
ಗರಂ ಮಸಾಲಾ – ¼ ಟೀ ಸ್ಪೂನ್
ಎಣ್ಣೆ – ಕರಿಯಲು

ಮಾಡುವ ವಿಧಾನ:

ಮೊದಲು ಒಂದು ಬೌಲ್‌ನಲ್ಲಿ ಮ್ಯಾಶ್ ಮಾಡಿದ ಆಲೂಗಡ್ಡೆ, ಚೀಸ್, ಕಾರ್ನ್, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ಮಸಾಲಾಗಳನ್ನು ಸೇರಿಸಿ ಚೆನ್ನಾಗಿ ಕಲಸಿ. ನಂತರ ಬ್ರೆಡ್ ಕ್ರಂಬ್ಸ್ ಹಾಕಿ ಮಿಶ್ರಣ ಗಟ್ಟಿಯಾಗುವಂತೆ ಮಾಡಿ.

ಈ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳು ಅಥವಾ ಕಬಾಬ್ ಆಕಾರಕ್ಕೆ ತಯಾರಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಮಧ್ಯಮ ಉರಿಯಲ್ಲಿ ಕಬಾಬ್‌ಗಳನ್ನು ಬಂಗಾರದ ಬಣ್ಣ ಬರುವವರೆಗೆ ಕರಿಯಿರಿ.

ಟಿಶ್ಯೂ ಮೇಲೆ ಹಾಕಿ ಹೆಚ್ಚುವರಿ ಎಣ್ಣೆ ತೆಗೆಯಿರಿ. ಬಿಸಿ ಬಿಸಿ ಚೀಸ್ ಕಬಾಬ್‌ಗಳನ್ನು ಪುದೀನ ಚಟ್ನಿ ಅಥವಾ ಟೊಮಾಟೊ ಸಾಸ್ ಜೊತೆ ಸವಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !