August 27, 2026
Thursday, August 27, 2026
spot_img

ಹೆದ್ದಾರಿಯಲ್ಲಿ ಆಹಾರ ಇಲಾಖೆ ದಾಳಿ: ಕ್ಯಾಂಟರ್‌ನಲ್ಲಿದ್ದ 300 ಚೀಲ ಪಡಿತರ ಅಕ್ಕಿ ವಶ

ಹೊಸದಿಗಂತ ವರದಿ ತುಮಕೂರು:

ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಸಾಗಿಸುತ್ತಿದ್ದ ಪಡಿತರ ಅಕ್ಕಿಯ ಮೂಟೆಗಳಿದ್ದ ಕ್ಯಾಂಟರ್ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಕ್ಯಾಂಟರ್ ಸಮೇತ ಪಡಿತರ ಅಕ್ಕಿಯನ್ನು ವಶಪಡಿಸಿ ಕೊಂಡಿದ್ದಾರೆ.

ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆಯ ಮಾಗಡಿ ಪಾಳ್ಯ ಸರ್ಕಲ್ ಹತ್ತಿರ ತೆರಳುತ್ತಿದ್ದಾಗ ಕ್ಯಾಂಟರ್ ಮೇಲೆ ಕುಣಿಗಲ್ ತಾಲೂಕಿನ ಅಮೃತೂರು ಪಿ ಎಸ್ ಐ ಪ್ರಶಾಂತ್ ಹಾಗೂ ಆಹಾರ ಶಿರಸ್ತೆದಾರ್ ಹರ್ಷ ನೇತೃತ್ವದ ತಂಡ ದಾಳಿ ನಡೆಸಿ ಕ್ಯಾಂಟರ್ ನಲ್ಲಿದ್ದ ದಾಖಲೆಗಳಿಲ್ಲದ 300 ಚೀಲ ಅಕ್ಕಿ ಮತ್ತು ಕ್ಯಾಂಟರ್ ಸೇರಿದಂತೆ ಚಾಲಕ ರಘು ಎಂಬುವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:

ವಶಕ್ಕೆ ಪಡೆದ ಪಡಿತರ ಅಕ್ಕಿ ಯಾರಿಗೆ ಸೇರಿದ್ದು, ಕೃತ್ಯದಲ್ಲಿ ಭಾಗಿಯಾದವರು ಯಾರು, ಎಲ್ಲಿಗೆ ಸಾಗಿಸುತ್ತಿದ್ದರು ಎಂಬ ಮಾಹಿತಿ ತನಿಕೆಯಿಂದ ತಿಳಿಯಬೇಕಾಗಿದೆ. ಆಹಾರ ನಿರೀಕ್ಷಕ ರಾದ ಚನ್ನಮ್ಮ ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !