August 31, 2026
Monday, August 31, 2026
spot_img

FOOD | ಎಷ್ಟು ಸುಲಭವಾಗಿ ಮಾಡ್ಬಹುದು ಗೊತ್ತಾ ಈ ಪಾಲಕ್ ಮೊಸರು ಬಜ್ಜಿ!

ಸರಳ, ರುಚಿಕರ ಮತ್ತು ಆರೋಗ್ಯಕರವಾದ ಪಾಲಕ್ ಮೊಸರು ಬಜ್ಜಿವನ್ನು ಊಟಕ್ಕೆ ಸೈಡ್ ಡಿಶ್ ಆಗಿ ಟ್ರೈ ಮಾಡಬಹುದು. ಚಪಾತಿ, ಪಲಾವ್, ಬಿರಿಯಾನಿ ಏನು ಇಲ್ಲಾಂದ್ರೆ ಅನ್ನಕ್ಕೂ ತುಂಬಾ ಚೆನ್ನಾಗಿ ಹೊಂದುತ್ತೆ.

ಬೇಕಾಗುವ ಸಾಮಗ್ರಿಗಳು:

ಪಾಲಕ್ ಸೊಪ್ಪು – 1 ಕಪ್ (ಸಣ್ಣದಾಗಿ ಕತ್ತರಿಸಿದ್ದು)
ಮೊಸರು – 1 ಕಪ್
ಹಸಿಮೆಣಸಿನಕಾಯಿ – 1
ಜೀರಿಗೆ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 1 ಟೀ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಕರಿಬೇವು – 5-6 ಎಲೆಗಳು
ಹಿಂಗು – ಚಿಟಿಕೆ

ಮಾಡುವ ವಿಧಾನ:

ಮೊದಲಿಗೆ ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಕತ್ತರಿಸಿ. ಈಗ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಪಾಲಕ್ ಅನ್ನು 2-3 ನಿಮಿಷ ಬೇಯಿಸಿ. ನಂತರ ನೀರು ತೆಗೆಯಿಸಿ ತಣ್ಣಗಾಗಲು ಬಿಡಿ.

ಮೊಸರನ್ನು ಚೆನ್ನಾಗಿ ಗೊಟಾಯಿಸಿ, ಬೇಯಿಸಿದ ಪಾಲಕ್, ಉಪ್ಪು ಮತ್ತು ಹಸಿಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಒಂದು ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ, ಹಿಂಗು ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ. ಇದನ್ನು ಮೊಸರಿನ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕಲಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !