ಮಹಾಶಿವರಾತ್ರಿಯಂದು ತಂಬಿಟ್ಟು ತಯಾರಿಸುವ ವಿಧಾನ ಹೇಗೆ ಇಲ್ಲಿದೆ ಸಿಂಪಲ್ ರೆಸಿಪಿ:
ಬೇಕಾಗುವ ಸಾಮಗ್ರಿಗಳು
* ಹುರಿಗಡಲೆ – 1 ಕಪ್
* ಒಣ ಕೊಬ್ಬರಿ ತುರಿ – 1 ಕಪ್
* ನೆಲಗಡಲೆ – 1/2 ಕಪ್
* ಎಳ್ಳು – 2 ಚಮಚ
* ಬೆಲ್ಲ – 1 ಕಪ್
* ಏಲಕ್ಕಿ ಪುಡಿ – 1/2 ಚಮಚ
* ತುಪ್ಪ – 2 ಚಮಚ
ತಯಾರಿಸುವ ವಿಧಾನ
ಮೊದಲಿಗೆ, ನೆಲಗಡಲೆ ಮತ್ತು ಎಳ್ಳನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಿ. ನಂತರ, ಹುರಿಗಡಲೆ ಮತ್ತು ಒಣ ಕೊಬ್ಬರಿ ತುರಿಯನ್ನು ಕೂಡಾ ಹುರಿಯಿರಿ. ಹುರಿದ ಎಲ್ಲಾ ಸಾಮಗ್ರಿಗಳನ್ನು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ, ಹುರಿಗಡಲೆ, ನೆಲಗಡಲೆ ಮತ್ತು ಒಣ ಕೊಬ್ಬರಿ ತುರಿಯನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಒಂದು ಬಾಣಲೆಯಲ್ಲಿ ಬೆಲ್ಲವನ್ನು ಹಾಕಿ ಕರಗಿಸಿ. ಬೆಲ್ಲದ ಪಾಕವು ಸ್ವಲ್ಪ ಗಟ್ಟಿಯಾಗುವವರೆಗೆ ಕಾಯಿಸಿ. ಬೆಲ್ಲದ ಪಾಕಕ್ಕೆ ಪುಡಿ ಮಾಡಿದ ಹುರಿಗಡಲೆ ಮಿಶ್ರಣ, ಹುರಿದ ಎಳ್ಳು, ಏಲಕ್ಕಿ ಪುಡಿ ಮತ್ತು ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವು ಸ್ವಲ್ಪ ತಣ್ಣಗಾದ ನಂತರ, ಕೈಗೆ ತುಪ್ಪ ಸವರಿ ಸಣ್ಣ ಉಂಡೆಗಳನ್ನು ಮಾಡಿ. ಇದೀಗ ಶಿವನಿಗೆ ಬಹಳ ಪ್ರಿಯವಾದ ತಂಬಿಟ್ಟು ಸವಿಯಲು ಸಿದ್ದ.
ತಂಬಿಟ್ಟನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಇಟ್ಟರೆ, ಹಲವಾರು ದಿನಗಳ ಕಾಲ ಕೆಡದೆ ಇರುತ್ತದೆ.