ಬೇಕಾಗುವ ಸಾಮಗ್ರಿಗಳು
200 ಗ್ರಾಂ ಪನೀರ್
1/2 ಕಪ್ ಹಾಲು
1/4 ಕಪ್ ಸಕ್ಕರೆ
1/4 ಕಪ್ ತುಪ್ಪ
1/4 ಟೀಸ್ಪೂನ್ ಏಲಕ್ಕಿ ಪುಡಿ
1 ಚಮಚ ಕತ್ತರಿಸಿದ ಪಿಸ್ತಾ ಅಥವಾ ಬಾದಾಮಿ
ಮಾಡುವ ವಿಧಾನ
ಪನೀರ್ ಅನ್ನು ಚೆನ್ನಾಗಿ ತುರಿದುಕೊಳ್ಳಿ. ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ. ಕಾದ ತುಪ್ಪಕ್ಕೆ ತುರಿದ ಪನೀರ್ ಸೇರಿಸಿ, 5-7 ನಿಮಿಷಗಳ ಕಾಲ ಹುರಿಯಿರಿ. ಹಾಲು ಸೇರಿಸಿ ಚೆನ್ನಾಗಿ ಕಲಕಿ. ಸಕ್ಕರೆ ಸೇರಿಸಿ, ಹಲ್ವಾ ಗಟ್ಟಿಯಾಗುವವರೆಗೆ ಕಲಕುತ್ತಿರಿ. ನಂತರ ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿ. ಇದೀಗ ಅಂತಿಮವಾಗಿ ಕತ್ತರಿಸಿದ ಪಿಸ್ತಾ ಅಥವಾ ಬಾದಾಮಿಯಿಂದ ಅಲಂಕರಿಸಿ. ಬಿಸಿ ಬಿಸಿಯಾದ ಪನೀರ್ ಹಲ್ವಾ ಸವಿಯಲು ಸಿದ್ಧ.