July 23, 2026
Thursday, July 23, 2026
spot_img

FOOD | ಹಿಟ್ಟು ಕಲಸುವ ಗೋಜಿಗೆ ಹೋಗ್ಬೇಡಿ: 10 ನಿಮಿಷದಲ್ಲಿ ರೈಸ್ ಪೇಪರ್ ಆಲೂ ಪರೋಟ ರೆಡಿ ಆಗುತ್ತೆ

ರೈಸ್ ಪೇಪರ್ ಬಳಸಿ ಮಾಡುವ ಆಲೂ ಪರೋಟ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಹಿಟ್ಟು ಕಲಸುವುದು, ಲಟ್ಟಿಸುವುದು ಯಾವುದೂ ಬೇಡ. ಕೇವಲ 10 ನಿಮಿಷಗಳಲ್ಲಿ ಗರಿಗರಿಯಾದ ಪರಾಟವನ್ನು ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು

ರೈಸ್ ಪೇಪರ್ ಶೀಟ್‌ಗಳು – 4
ಬೇಯಿಸಿದ ಆಲೂಗಡ್ಡೆ – 2
ಈರುಳ್ಳಿ – 1
ಹಸಿಮೆಣಸಿನಕಾಯಿ – 1 ರಿಂದ 2
ಕೊತ್ತಂಬರಿ ಸೊಪ್ಪು – ಸ್ವಲ್ಪ
ಖಾರದ ಪುಡಿ – 1 ಚಮಚ
ಜೀರಿಗೆ ಪುಡಿ – 1 ಚಮಚ
ಆಮ್‌ಚೂರ್ ಪುಡಿ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ತುಪ್ಪ ಅಥವಾ ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ಚೀಸ್ ಸ್ಲೈಸ್ – 1

ಮಾಡುವ ವಿಧಾನ

ಬೇಯಿಸಿದ ಆಲೂಗಡ್ಡೆಯನ್ನು ಚೆನ್ನಾಗಿ ಮ್ಯಾಶ್ ಮಾಡಿ. ಇದಕ್ಕೆ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಖಾರದ ಪುಡಿ, ಜೀರಿಗೆ ಪುಡಿ, ಆಮ್‌ಚೂರ್ ಪುಡಿ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.

ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಳ್ಳಿ. ರೈಸ್ ಪೇಪರ್ ಶೀಟ್ ಅನ್ನು 5 ರಿಂದ 10 ಸೆಕೆಂಡುಗಳ ಕಾಲ ನೀರಿನಲ್ಲಿ ಅದ್ದಿ ತಕ್ಷಣ ಹೊರಗೆ ತೆಗೆಯಿರಿ.

ರೈಸ್ ಪೇಪರ್ ಅನ್ನು ತಟ್ಟೆಯ ಮೇಲೆ ಇಟ್ಟು ಮಧ್ಯಭಾಗದಲ್ಲಿ ಆಲೂಗಡ್ಡೆ ಮಸಾಲಾ ಹರಡಿ. ಬೇಕಿದ್ದರೆ ಮೇಲಿಂದ ಚೀಸ್ ಸ್ಲೈಸ್ ಇಡಿ.

ಇನ್ನೊಂದು ರೈಸ್ ಪೇಪರ್ ಶೀಟ್ ಅನ್ನು ನೀರಿನಲ್ಲಿ ಅದ್ದಿ ಮಸಾಲಾ ಮೇಲೆ ಮುಚ್ಚಿ. ಬದಿಗಳನ್ನು ಚೆನ್ನಾಗಿ ಒತ್ತಿ ಲಾಕ್ ಮಾಡಿ. ಹೆಚ್ಚು ಕ್ರಿಸ್ಪಿ ಬೇಕಿದ್ದರೆ ಹೆಚ್ಚುವರಿ ರೈಸ್ ಪೇಪರ್ ಶೀಟ್ ಹಾಕಬಹುದು.

ಬಿಸಿ ತವಾದ ಮೇಲೆ ತುಪ್ಪ ಅಥವಾ ಎಣ್ಣೆ ಸವರಿ. ಪರೋಟವನ್ನು ಎರಡೂ ಬದಿಗಳಲ್ಲಿ ಗೋಲ್ಡನ್ ಬಣ್ಣ ಬರುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ.

ಬಿಸಿ ಬಿಸಿ ರೈಸ್ ಪೇಪರ್ ಆಲೂ ಪರೋಟವನ್ನು ಮೊಸರು, ಪುದೀನಾ ಚಟ್ನಿ ಅಥವಾ ಟೊಮೆಟೊ ಸಾಸ್ ಜೊತೆಗೆ ಸವಿದರೆ ರುಚಿ ಮತ್ತಷ್ಟು ಹೆಚ್ಚುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !