ಹೊರಗಡೆ ಅಂಗಡಿಗಳಲ್ಲಿ ಅಥವಾ ಮಾಲ್‌ಗಳಲ್ಲಿ ನಾಚೋಸ್ ತುಂಬಾ ದುಬಾರಿ. ಆದ್ದರಿಂದ ಇದನ್ನು ಮನೆಯಲ್ಲಿಯೇ ತಯಾರಿಸುವ ಸುಲಭ ವಿಧಾನವನ್ನು ಈ ರೆಸಿಪಿಯಲ್ಲಿ ತಿಳಿಸಿಕೊಡುತ್ತೇವೆ.
ಬೇಕಾಗುವ ಸಾಮಗ್ರಿಗಳು:
ನೀರು-ಕಾಲು ಕಪ್
ಉಪ್ಪು- ಕಾಲು ಚಮಚ
ಅಕ್ಕಿ ಹಿಟ್ಟು – 1ಕಪ್
ಅಚ್ಚಖಾರದ ಪುಡಿ – 1ಚಮಚ
ಜೋಳದ ಹಿಟ್ಟು – ಅರ್ಧ ಕಪ್
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ:
ಮೊದಲಿಗೆ ಒಂದು ಪ್ಯಾನ್ ಬಿಸಿಗಿಟ್ಟು ಕಾಲು ಕಪ್ ನೀರನ್ನು ಹಾಕಿಕೊಂಡು ಅದಕ್ಕೆ ಕಾಲು ಚಮಚ ಉಪ್ಪನ್ನು ಸೇರಿಸಿಕೊಳ್ಳಿ. ನೀರು ಬಿಸಿಯಾದ ಬಳಿಕ ಅದಕ್ಕೆ 1 ಕಪ್ ಅಕ್ಕಿ ಹಿಟ್ಟನ್ನು ಸೇರಿಸಿಕೊಂಡು ಗಂಟಾಗದಂತೆ ಚನ್ನಾಗಿ ತಿರುವಿಕೊಂಡು 2 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
ಈಗ ಈ ಮಿಶ್ರಣವನ್ನು ಒಂದು ಬೌಲ್‌ಗೆ ಹಾಕಿಕೊಂಡು ಅದಕ್ಕೆ 1 ಚಮಚ ಖಾರದ ಪುಡಿಯನ್ನು ಹಾಕಿಕೊಳ್ಳಿ. ಬಳಿಕ ಇದಕ್ಕೆ ಅರ್ಧ ಕಪ್ ಜೋಳದ ಹಿಟ್ಟನ್ನು ಹಾಕಿಕೊಂಡು ಚಪಾತಿ ಹಿಟ್ಟಿನ ರೀತಿಯಲ್ಲಿ ಕಲಸಿಕೊಳ್ಳಿ.
ಈ ಮಿಶ್ರಣದ ಮೇಲೆ 1 ಚಮಚ ಎಣ್ಣೆ ಹಾಕಿಕೊಂಡು ಚನ್ನಾಗಿ ನಾದಿಕೊಳ್ಳಿ. ಬಳಿಕ ಹಿಟ್ಟನ್ನು ಚೆಂಡಿನ ಗಾತ್ರದಲ್ಲಿ ಉಂಡೆ ಮಾಡಿಕೊಂಡು ತೆಳ್ಳಗೆ ಲಟ್ಟಿಸಿಕೊಳ್ಳಿ.ಇದರ ಮೇಲೆ ಫೋರ್ಕ್ ಚಮಚದ ಸಹಾಯದಿಂದ ಅಲ್ಲಲ್ಲಿ ಚುಚ್ಚಿಕೊಳ್ಳಿ. ಬಳಿಕ ಇದನ್ನು ತ್ರಿಕೋನ ಆಕಾರದಲ್ಲಿ ಕತ್ತರಿಸಿಕೊಂಡು ಎಣ್ಣೆಯಲ್ಲಿ 3 ನಿಮಿಷಗಳವರೆಗೆ ಕರಿಯಿರಿ.
ನಾಚೋಸ್ ಗೋಲ್ಡನ್ ಬಣ್ಣ ಬಂದ ಬಳಿಕ ಅದನ್ನು ಎಣ್ಣೆಯಿಂದ ತೆಗೆದು ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿ ಸಾಲ್ಸಾ ಅಥವಾ ಮಯೋನೀಸ್ ಜೊತೆ ಸವಿಯಲು ಕೊಡಿ.