ಹೊಸದಿಗಂತ ಡಿಜಿಟಲ್ ಡೆಸ್ಕ್:
ಯತ್ನಾಳ್ ಉಚ್ಚಾಟನೆಯ ಯತ್ನ ಈ ಮೊದಲೇ ನಡೆದಿತ್ತು. ನಮಗೆ ಮೊದಲೇ ಈ ಬಗ್ಗೆ ಸುದ್ದಿ ಇತ್ತು ಎಂದು ಶಾಸಕ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಹೈಕಮಾಂಡ್ ಜೊತೆಗೆ ನಿನ್ನೆ ರಾತ್ರಿ ನಾನು ಮಾತನಾಡಿದ್ದೇನೆ. ಪಕ್ಷಕ್ಕೆ ಯತ್ನಾಳ್ ಬಹಳಷ್ಟು ದುಡಿದಿದ್ದಾರೆ. ಯತ್ನಾಳ್ ಮತ್ತೆ ಬಿಜೆಪಿಗೆ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯತ್ನಾಳ್ ಅವರು ಪಕ್ಷದ ದೊಡ್ಡ ನಾಯಕರು. ನಮ್ಮ ಪಕ್ಷ ಯಾಕೆ ಇಂತಹ ನಿರ್ಧಾರ ತೆಗೆದುಕೊಂಡಿದೆ ಗೊತ್ತಿಲ್ಲ. ನಾಳೆ ಎಲ್ಲಾ ನಾಯಕರು ಬೆಂಗಳೂರಿನಲ್ಲಿ ಸಭೆ ನಡೆಸಿ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.