March 22, 2026
Sunday, March 22, 2026
spot_img

FOOD | ಚಿಕನ್ ಮರೆತು ಬಿಡ್ತೀರ! ಈ ಪ್ರೊಟೀನ್ ರಿಚ್ ಸೋಯಾ ಸ್ಯಾಂಡ್‌ವಿಚ್ ತಿಂದ್ರೆ

ಪ್ರೊಟೀನ್ ನಿಂದ ಸಮೃದ್ಧವಾದ ಸೋಯಾ ಚಂಕ್ಸ್ ಬಳಸಿ ತಯಾರಿಸುವ ಈ ಸ್ಯಾಂಡ್‌ವಿಚ್ ಬೆಳಗಿನ ಉಪಾಹಾರಕ್ಕೆ ಅಥವಾ ಸಂಜೆ ಟೀ ಟೈಮ್‌ಗೆ ಸೂಕ್ತ. ರುಚಿ ಹಾಗೂ ಆರೋಗ್ಯ ಎರಡನ್ನೂ ಒಟ್ಟಿಗೆ ನೀಡುವ ಸರಳ ರೆಸಿಪಿ ಇದು.

ಬೇಕಾಗುವ ಸಾಮಗ್ರಿಗಳು

ಸೋಯಾ ಚಂಕ್ಸ್ – 1 ಕಪ್
ಬ್ರೆಡ್ ಸ್ಲೈಸ್‌ಗಳು – 6
ಈರುಳ್ಳಿ (ಸಣ್ಣದು) – 1
ಹಸಿಮೆಣಸು – 1
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಅರಿಶಿನ – ಚಿಟಿಕೆ
ಕೆಂಪು ಮೆಣಸಿನ ಪುಡಿ – ½ ಚಮಚ
ಗರಂ ಮಸಾಲೆ – ½ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಬೆಣ್ಣೆ/ಎಣ್ಣೆ – ಬೇಕಾದಷ್ಟು

ಮಾಡುವ ವಿಧಾನ

ಸೋಯಾ ಚಂಕ್ಸ್ ಅನ್ನು ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಿಟ್ಟು, ನೀರು ಚೆನ್ನಾಗಿ ಹಿಂಡಿ ಸಣ್ಣ ಚೂರುಗಳಾಗಿ ಮಾಡಿ.

ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ, ಹಸಿಮೆಣಸು ಹಾಕಿ ಹುರಿಯಿರಿ. ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ, ನಂತರ ಸೋಯಾ ಚಂಕ್ಸ್ ಸೇರಿಸಿ ಮಸಾಲೆ ಹಾಗೂ ಉಪ್ಪು ಹಾಕಿ ಚೆನ್ನಾಗಿ ಕಲಸಿ. ಕೊನೆಗೆ ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ತಣ್ಣಗಾಗಲು ಬಿಡಿ.

ಬ್ರೆಡ್ ಮೇಲೆ ಮಿಶ್ರಣ ಹಚ್ಚಿ ಮತ್ತೊಂದು ಬ್ರೆಡ್‌ನಿಂದ ಮುಚ್ಚಿ, ತವಾ ಮೇಲೆ ಬೆಣ್ಣೆ ಹಚ್ಚಿ ಎರಡೂ ಬದಿಯಲ್ಲಿ ಕಂದು ಬಣ್ಣ ಬರುವವರೆಗೆ ಕಾಯಿಸಿ. ಬಿಸಿ ಬಿಸಿ ಸ್ಯಾಂಡ್‌ವಿಚ್‌ನ್ನು ಟೊಮೇಟೊ ಸಾಸ್ ಜೊತೆ ಸವಿಯಿರಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !