September 28, 2026
Monday, September 28, 2026
spot_img

FOOD | ಹಳ್ಳಿ ಕಡೆ ಮಾಡೋ ದೊಣ್ಣೆಮೆಣಸಿನಕಾಯಿಯ ಅನ್ನ ಎಂದಾದ್ರೂ ತಿಂದಿದ್ದೀರಾ?

ಸಾಮಾಗ್ರಿಗಳು
ಕ್ಯಾಪ್ಸಿಕಂ
ಈರುಳ್ಳಿ
ಶೇಂಗಾ
ಬೆಳ್ಳ್ಳುಳ್ಳಿ
ಒಣಮೆಣಸು
ಖಾರದಪುಡಿ
ಗರಂ ಮಸಾಲಾ
ಕಾಯಿ
ಒಗರಣೆ

ಮಾಡುವ ವಿಧಾನ
ಮೊದಲು ಬಾಣಲೆಗೆ ಶೇಂಗಾ, ಎಳ್ಳು, ಒಣಮೆಣಸು, ಬೆಳ್ಳುಳ್ಳಿ ಹಾಕಿ, ನಂತರ ಕಾಯಿ ಹಾಕಿ ರೋಸ್ಟ್‌ ಮಾಡಿ.
ತಣ್ಣಗಾದ ನಂತರ ಪೌಡರ್‌ ಮಾಡಿ ಇಟ್ಟುಕೊಳ್ಳಿ
ಆನಂತರ ಪ್ಯಾನ್‌ಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಹಿಂಗ್‌ ಕರಿಬೇವು ಹಾಕಿ
ಆಮೇಲೆ ಈರುಳ್ಳಿ ಹಾಕಿ ಬಾಡಿಸಿ, ಉಪ್ಪು ಹಾಕಿ, ಈರುಳ್ಳಿ ಬೆಂದ ನಂತರ ಕ್ಯಾಪ್ಸಿಕಂ ಹಾಕಿ ಬಾಡಿಸಿ
ಇದಕ್ಕೆ ಖಾರದಪುಡಿ, ಸಾಂಬಾರ್‌ಪುಡಿ, ಗರಂ ಮಸಾಲಾ ಹಾಕಿ
ಕಡೆಗೆ ಮಿಕ್ಸಿಯ ಮಸಾಲಾ ಹಾಕಿ, ಎರಡು ನಿಮಿಷ ಬಾಡಿಸಿ ಅನ್ನ ಹಾಕಿ ಮಿಕ್ಸ್‌ ಮಾಡಿದ್ರೆ ಕ್ಯಾಪ್ಸಿಕಂ ರೈಸ್‌ ರೆಡಿ

Must Read