ಪದಾರ್ಥಗಳು:
* ಬಾಸ್ಮತಿ ಅಕ್ಕಿ – 1 ಕಪ್
* ಬಟಾಣಿ – 1/4 ಕಪ್
* ಸಿಹಿ ಗೆಣಸು – 1/4 ಕಪ್
* ಕಾರ್ನ್- 1/2 ಕಪ್
* ಈರುಳ್ಳಿ – 1, ಸಣ್ಣಗೆ ಹೆಚ್ಚಿದ್ದು
* ಪುದೀನ
* ಕೊತ್ತಂಬರಿ
* ಮೆಣಸಿನಕಾಯಿ – 2-3,
* ಅರಿಶಿನ ಪುಡಿ – 1/4 ಟೀಸ್ಪೂನ್
* ಖಾರದ ಪುಡಿ – 1/2 ಟೀಸ್ಪೂನ್
* ಗರಂ ಮಸಾಲಾ ಪುಡಿ – 1/4 ಟೀಸ್ಪೂನ್
* ಎಣ್ಣೆ – 2 ಟೇಬಲ್ಸ್ಪೂನ್
* ಉಪ್ಪು – ರುಚಿಗೆ ತಕ್ಕಷ್ಟು
* ನೀರು – ಅಗತ್ಯಕ್ಕೆ ತಕ್ಕಷ್ಟು
ತಯಾರಿಸುವ ವಿಧಾನ:
ಬಾಸ್ಮತಿ ಅಕ್ಕಿಯನ್ನು ಸುಮಾರು 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಹಾಕಿಡಿ. ಬಟಾಣಿ, ಸಿಹಿ ಗೆಣಸು ಮತ್ತು ಕಾರ್ನ್ ಕರ್ನಲ್ಸ್‌ಗಳನ್ನು ಕುಕ್ಕರ್‌ನಲ್ಲಿ 2-3 ವಿಷಲ್ ಬರುವವರೆಗೆ ಬೇಯಿಸಿ. ಈರುಳ್ಳಿಯನ್ನು ಎಣ್ಣೆಯಲ್ಲಿ ಸ್ವಲ್ಪ ಹುರಿಯಿರಿ. ಅರಿಶಿನ ಪುಡಿ, ಖಾರದ ಪುಡಿ ಮತ್ತು ಗರಂ ಮಸಾಲಾ ಪುಡಿ ಸೇರಿಸಿ ಫ್ರೈ ಮಾಡಿ. ನೆನೆಹಾಕಿದ ಅಕ್ಕಿಯನ್ನು ಮಾಡಿದ ಮಿಶ್ರಣಕ್ಕೆ ಸೇರಿಸಿ, ಉಪ್ಪು ಹಾಕಿ ಮಿಕ್ಸ್ ಮಾಡಿ. ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ, ಕುಕ್ಕರ್ ಮುಚ್ಚಿ 2-3 ವಿಷಲ್ ಬರುವವರೆಗೆ ಬೇಯಿಸಿ.
ಈ ಸುಲಭವಾದ ವಿಧಾನದಿಂದ ನೀವು ಮನೆಯಲ್ಲಿಯೇ ರುಚಿಕರವಾದ ಕಾರ್ನ್ ಪುಲಾವ್ ತಯಾರಿಸಬಹುದು.