FOOD | ಟೇಸ್ಟಿ ಪಾಲಕ್ ಸೂಪ್ ಎಂದಾದರೂ ಟ್ರೈ ಮಾಡಿದ್ದೀರಾ? ಇಲ್ಲಿದೆ ಸಿಂಪಲ್ ರೆಸಿಪಿ..!

ಬೇಕಾಗುವ ಸಾಮಗ್ರಿಗಳು:
ಪಾಲಕ್ – 6 ಎಲೆ
ಕ್ಯಾರೆಟ್ – 1
1 ಕಪ್ – ಹಾಲು
2 ಕಪ್-ನೀರು
ಸ್ಪಿಂಗ್ ಆನಿಯನ್ – 1
1 ಟೇಬಲ್ ಸ್ಪೂನ್ – ಕಾರ್ನ್ ಫ್ಲೋರ್
¾ ಕಪ್ ತುರಿದ ಚೀಸ್
ಕಾಳುಮೆಣಸಿನ ಪುಡಿ – ರುಚಿಗೆ ತಕ್ಕಷ್ಟು
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಮೊದಲು, ಪಾಲಕ ಮತ್ತು ಹಸಿರು ಈರುಳ್ಳಿ ಕತ್ತರಿಸಿ ಪ್ರತ್ಯೇಕವಾಗಿ ಸಂಗ್ರಹಿಸಿ. ಕ್ಯಾರೆಟ್ ಅನ್ನು ಸಹ ತುರಿ ಮಾಡಿ. ಬಾಣಲೆಗೆ ಹಾಲು, ಜೋಳದ ಹಿಟ್ಟು ಮತ್ತು ನೀರನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಹಸಿರು ಈರುಳ್ಳಿ, ಪಾಲಾಕ್ ಮತ್ತು ಕ್ಯಾರೆಟ್ ಸೇರಿಸಿ, ಬೆರೆಸಿ ಮತ್ತು 5 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ.

ತಳಹತ್ತದಂತೆ ಕೈಯಾಡಿಸುತ್ತಲೇ ಇರಿ. ನಂತರ ಇದಕ್ಕೆ ಚೀಸ್, ಉಪ್ಪು, ಕಾಳುಮೆಣಸಿಪುಡಿ ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ಬಿಸಿ ಬಿಸಿ ಸರ್ವ್ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!