ಒತ್ತು ಶ್ಯಾವಿಗೆ ರಸಾಯನ ದಕ್ಷಿಣ ಭಾರತದ ಮೂಲದ ಬೆಳಗಿನ ಉಪಹಾರ. ಅಕ್ಕಿ ಹಿಟ್ಟನ್ನು ಬೇಯಿಸಿ ಶ್ಯಾವಿಗೆ ಒರಳಿನಲ್ಲಿ ಒತ್ತಿ ರಸಾಯನದ ಜೊತೆ ಸವಿದರೆ ಬೇರೆ ತಿಂಡಿಯ ರುಚಿ ನಾಲಗೆಗೆ ಖಂಡಿತ ಹತ್ತದು.
ಒತ್ತು ಶ್ಯಾವಿಗೆ ಬೇಕಾಗುವ ಪದಾರ್ಥಗಳು:
ಅಕ್ಕಿ ಹಿಟ್ಟು- 3 ಕಪ್
ನೀರು- 4 ಕಪ್
ರುಚಿಗೆ ತಕ್ಕಷ್ಟು ಉಪ್ಪು
1 ಚಮಚ ಎಣ್ಣೆ
ಮಾವಿನ ರಸಾಯನಕ್ಕೆ ಬೇಕಾಗುವ ಪದಾರ್ಥಗಳು:
ಮಾವಿನ ಹಣ್ಣು ನುಣ್ಣಗೆ ಕತ್ತರಿಸಿದ್ದು- 1 ಕಪ್
ತೆಂಗಿನ ಹಾಲು – 2 ಕಪ್
ಬೆಲ್ಲ- ಮುಕ್ಕಾಲು ಕಪ್
ಸಕ್ಕರೆ- 2-3 ಚಮಚ
ಏಲಕ್ಕಿ 1 ಸ್ವಲ್ಪ
ಒತ್ತು ಶ್ಯಾವಿಗೆ ಮಾಡುವ ವಿಧಾನ
ಪಾತ್ರೆಯಲ್ಲಿ ನೀರು ಮತ್ತು ಎಣ್ಣೆಯನ್ನು ಸೇರಿಸಿ ಕುದಿಸಿ. ಅದಕ್ಕೆ ನಿಮ್ಮ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. ಈಗ ಈ ನೀರಿಗೆ ಅಕ್ಕಿ ಹಿಟ್ಟು ಹಾಕಿ ನಿಧಾನವಾಗಿ ಮಿಶ್ರಣ ಮಾಡಿ ಅದನ್ನು ಬೇಯಿಸಲು ಬಿಡಿ.
ಹಿಟ್ಟು ಸ್ವಲ್ಪ ಆರಿದ ನಂತರ ಹಿಟ್ಟಿನಿಂದ ಉಂಡೆಯನ್ನು ಮಾಡಿ ಮತ್ತು ಸ್ಟೀಮರ್ನಲ್ಲಿ ಇರಿಸಿ ಸುಮಾರು 15 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿ. ನಂತರ ಅದನ್ನು ಚಕ್ಕುಲಿ ಮೇಕರ್ನಲ್ಲಿ ಹಾಕಿ ಶ್ಯಾವಿಗೆ ರೀತಿ ಒತ್ತಿದರೆ ಶ್ಯಾವಿಗೆ ರೆಡಿ
ರಸಾಯನ ಪಾಕವಿಧಾನ:
ಒಂದು ಬಟ್ಟಲಿನಲ್ಲಿ ತುರಿದ ಬೆಲ್ಲ ತೆಂಗಿನಕಾಯಿ ಹಾಲು ಸೇರಿಸಿ ಬೆಲ್ಲ ಕರಗಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಸಕ್ಕರೆ ಮಾವಿನ ಹಣ್ಣು (ಸಣ್ಣಗೆ ತುಂಡು ಮಾಡಿದ್ದು) ಮತ್ತು ಏಲಕ್ಕಿ ಸೇರಿಸಿ ಸ್ವಲ್ಪ ಮಿಶ್ರಣ ಮಾಡಿದರೆ ರಸಾಯನ ರೆಡಿ.