ಚನ್ನಾ ಮಸಾಲಾ ಉತ್ತರ ಭಾರತದ ಜನಪ್ರಿಯ ಅಡುಗೆಗಳಲ್ಲಿ ಒಂದಾಗಿದೆ. ಚನ್ನಾ ಎಂದರೆ ಕಾಬುಲ್ ಕಡ್ಲೆ ಇದನ್ನ ಮಸಾಲೆಗಳಲ್ಲಿ ಹಾಕಿ ಬೇಯಿಸಿದರೆ ಚನ್ನಾ ಮಸಾಲಾ ತಯಾರಾಗುತ್ತೆ.
ಇವತ್ತು ತುಂಬಾ ಸುಲಭವಾಗಿ ಚನ್ನಾ ಮಸಾಲಾ ತಯಾರಿಸೋದು ಹೇಗೆ ಅಂತ ನೋಡೋಣ.
ಬೇಕಾಗುವ ಸಾಮಗ್ರಿಗಳು:
1 ಕಪ್ ಕಾಬುಲ್ ಕಡ್ಲೆ
2 ಟೊಮೋಟೋ
1 ಈರುಳ್ಳಿ
1 ಇಂಚು ಶುಂಠಿ
4-5 ಬೆಳ್ಳುಳ್ಳಿ
1 ಟೀಸ್ಪೂನ್ ಜೀರಿಗೆ
1/2 ಟೀಸ್ಪೂನ್ ಹುಣಸೆ ರಸ
1 ಟೀಸ್ಪೂನ್ ಧನಿಯಾ ಪುಡಿ
1 ಟೀಸ್ಪೂನ್ ಜೀರಿಗೆ ಪುಡಿ
1/2 ಟೀಸ್ಪೂನ್ ಮೆಣಸಿನ ಪುಡಿ
1/4 ಟೀಸ್ಪೂನ್ ಗರಂ ಮಸಾಲಾ
2 ಟೇಬಲ್ ಸ್ಪೂನ್ ತೆಂಗಿನಕಾಯಿ ಹಾಲು
ಸ್ವಲ್ಪ ಕೊತ್ತಂಬರಿ ಸೊಪ್ಪು
2 ಟೇಬಲ್ ಸ್ಪೂನ್ ಎಣ್ಣೆ
ಉಪ್ಪು ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ:
ಮೊದಲು ಕಾಬುಲ್ ಕಡ್ಲೆಯನ್ನು ರಾತ್ರಿಯಿಡಿ ಅಥವಾ 6 ರಿಂದ 7 ಗಂಟೆಗಳ ಕಾಲ ನೀರಿನಲ್ಲಿ ಸೋಕ್ ಮಾಡಿ ಇಡಬೇಕು. ನಂತರ ಕುಕ್ಕರ್‌ನಲ್ಲಿ ಹಾಕಿ 5 ರಿಂದ 6 ಸೀಟಿ ಬರುವಂತೆ ಬೇಯಿಸಿಕೊಳ್ಳಬೇಕು.
ಮತ್ತೊಂದು ಕಡೆ ಬಾಣಲೆಯಲ್ಲಿ ಎಣ್ಣೆ ಹಾಕಿ, ಜೀರಿಗೆ, ಶುಂಠಿ, ಬೆಳ್ಳುಳ್ಳಿ ಹಾಕಿ ಹುರಿಯಿರಿ. ನಂತ್ರ ಈರುಳ್ಳಿ ಹಾಕಿ ಬಣ್ಣ ಬದಲಾಗುವವವರೆಗೆ ಫ್ರೈ ಮಾಡಿ ಟೊಮೋಟೋ ಪೇಸ್ಟ್ ಸೇರಿಸಿ ಅದನ್ನ ಸ್ವಲ್ಪ ಬಾಡಿಸಿಕೊಂಡು ಎಲ್ಲ ಪುಡಿಮಸಾಲೆಗಳು ಹಾಕಿ ಚೆನ್ನಾಗಿ ಬೆರೆಸಿ.
ನಂತರ ಆ ಮಸಾಲೆಗಳಿಗೆ ಬೇಯಿಸಿದ ಕಾಬುಲ್ ಕಡ್ಲೆ ಸೇರಿಸಿ, ಸ್ವಲ್ಪ ನೀರು ಹಾಕಿ ಚನ್ನಾಗಿ ಕುದಿಸಿರಿ. ಕೊನೆಗೆ ಗರಂ ಮಸಾಲಾ, ಕೊತ್ತಂಬರಿ ಸೊಪ್ಪು ಹಾಗೂ ಸ್ವಲ್ಪ ತೆಂಗಿನಕಾಯಿ ಹಾಲು ಸೇರಿಸಿದರೆ ಚನ್ನಾ ಮಸಾಲಾ ರೆಡಿ. ಇದನ್ನ ಬಟೂರಾ, ಚಪಾತಿ, ನಾನ್, ಅಥವಾ ಜೀರಾ ರೈಸ್ ನೊಂದಿಗೆ ಸವಿಯಬಹುದು.