FOOD | ಆರೋಗ್ಯಕರ ಬೀಟ್‌ರೂಟ್‌ ಸೂಪ್, ಒಮ್ಮೆ ನೀವೂ ಟ್ರೈ ಮಾಡಿ ನೋಡಿ

ಬೀಟ್‌ರೂಟ್‌ ಸೂಪ್ ಆರೋಗ್ಯಕರ ಮತ್ತು ರುಚಿಕರವಾದ ಒಂದು ಖಾದ್ಯವಾಗಿದೆ. ಇದು ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಈ ಸೂಪ್‌ ಅನ್ನು ತಯಾರಿಸುವುದು ತುಂಬಾ ಸುಲಭವಾಗಿದ್ದು, ಮಾಡೋದು ಹೇಗೆ ಅಂತ ನೋಡೋಣ.

ಬೇಕಾಗುವ ಪದಾರ್ಥಗಳು

ಬೀಟ್‌ರೂಟ್‌- 1
ಬೆಣ್ಣೆ – 1 ಚಮಚ
ಬಿರಿಯಾನಿ ಎಲೆ – 1
ಮೆಣಸು – ಒಂದು ಚಮಚ
ಶುಂಠಿ- ಒಂದು ಸಣ್ಣ ತುಂಡು
ಬೆಳ್ಳುಳ್ಳಿ -3 ಎಸಳು
ಈರುಳ್ಳಿ- 1
ಕ್ಯಾರೆಟ್- 1
ಕಾಳು ಮೆಣಸಿನ ಪುಡಿ- ಸ್ವಲ್ು
ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಈರುಳ್ಳಿ ಮತ್ತು ಕ್ಯಾರೆಟ್ ಅನ್ನು ತೊಳೆದು ಸಣ್ಣಗೆ ಕತ್ತರಿಸಿ. ನಂತರ ಬೀಟ್‌ರೂಟ್‌ ​ಸಿಪ್ಪೆ ತೆಗೆದು ತೆಳುವಾದ ತುಂಡುಗಳಾಗಿ ಕತ್ತರಿಸಿ.

ಈಗ ಒಲೆಯ ಮೇಲೆ ನಾನ್ ಸ್ಟಿಕ್ ಪ್ಯಾನ್ ಇಟ್ಟು ಬೆಣ್ಣೆಯನ್ನು ಹಾಕಿ. ಬೆಣ್ಣೆ ಕರಗಿದ ನಂತರ ಬಿರಿಯಾನಿ ಎಲೆ, ಕಾಳು ಮೆಣಸು, ಶುಂಠಿ ತುಂಡು, ಬೆಳ್ಳುಳ್ಳಿ ಚೆನ್ನಾಗಿ ಹಾಕಿ ಫ್ರೈ ಮಾಡಿ. ಮತ್ತು ಕ್ಯಾರೆಟ್ ತುಂಡುಗಳನ್ನು ಹಾಕಿ ಸ್ವಲ್ಪ ಫ್ರೈ ಮಾಡಿ.

ನಂತರ ಬೀಟ್ರೂಟ್ ಚೂರುಗಳನ್ನು ಸೇರಿಸಿ ಸ್ಟವ್ ಅನ್ನು ಮಧ್ಯಮ ಉರಿಯಲ್ಲಿರಿಸಿ, ಸರಿಯಾಗಿ ಮಚ್ಚಳವನ್ನು ಮುಚ್ಚಿ 5 ನಿಮಿಷ ಬೇಯಿಸಿ.

ಬಳಿಕ ಒಂದು ಕಪ್ ನೀರು ಹಾಕಿ ಮತ್ತೆ ಮುಚ್ಚಿ, ಸ್ವಲ್ಪ ಸಮಯ ಕುದಿಸಿ. ಈಗ ಸ್ಟವ್ ಆಫ್ ಮಾಡಿ ಮತ್ತು ಈ ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಬಿರಿಯಾನಿ ಎಲೆ ತೆಗೆದು ಈ ಮಿಶ್ರಣವನ್ನು ಮಿಕ್ಸಿ ಜಾರ್​ಗೆ ಹಾಕಿ, ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಇದಕ್ಕೆ ಸ್ವಲ್ಪ ನೀರು ಸೇರಿಸಿ.

ಈ ಸೂಪ್​ನ್ನು ಒಲೆಯ ಮೇಲೆ ಇರಿಸಿ ಮತ್ತು ಒಂದರಿಂದ ಮೂರು ನಿಮಿಷಗಳ ಕಾಲ ಕುದಿಸಿ.

ಸ್ವಲ್ಪ ಉಪ್ಪು, ಚಿಟಿಕೆ ಕಾಳುಮೆಣಸಿನ ಪುಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಆರೋಗ್ಯಕರವಾದ ಬೀಟ್‌ರೂಟ್‌ ಸೂಪ್ ಸವಿಯಲು ಸಿದ್ಧ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!