ತೆಂಗಿನಕಾಯಿ ಪುಡಿಂಗ್ ಬೇಕಾಗುವ ಸಾಮಗ್ರಿಗಳು:
2 ತುರಿದ ತೆಂಗಿನಕಾಯಿ
1/2 ಕಪ್ ಸಕ್ಕರೆ
1/4 ಕಪ್ ಕಾರ್ನ್ ಫ್ಲೋರ್
2 ಕಪ್ ಹಾಲು
1/4 ಸ್ಪೂನ್ ಏಲಕ್ಕಿ ಪುಡಿ
1 ಸ್ಪೂನ್ ಬೆಣ್ಣೆ
ಮಾಡುವ ವಿಧಾನ:
ಒಂದು ಬಟ್ಟಲಿನಲ್ಲಿ, ಕಾರ್ನ್ ಫ್ಲೋರ್ ಮತ್ತು 1/2 ಕಪ್ ಹಾಲನ್ನು ಸೇರಿಸಿ, ಚೆನ್ನಾಗಿ ಕಲಕಿ, ಉಂಡೆಗಳಿಲ್ಲದಂತೆ ಪೇಸ್ಟ್ ಮಾಡಿ. ಒಂದು ಪಾತ್ರೆಯಲ್ಲಿ, ತುರಿದ ತೆಂಗಿನಕಾಯಿ, ಸಕ್ಕರೆ ಮತ್ತು ಉಳಿದ ಹಾಲನ್ನು ಸೇರಿಸಿ. ಮಧ್ಯಮ ಉರಿಯಲ್ಲಿ ಕುದಿಯಲು ಬಿಡಿ. ಉರಿಯನ್ನು ಕಡಿಮೆ ಮಾಡಿ, ಕಾರ್ನ್ ಫ್ಲೋರ್ ಪೇಸ್ಟ್ ಸೇರಿಸಿ. ಉಂಡೆಗಳಾಗದಂತೆ ನಿರಂತರವಾಗಿ ಕೈ ಆಡಿಸಿ. ನಂತರ ಏಲಕ್ಕಿ ಪುಡಿ ಮತ್ತು ಬೆಣ್ಣೆ ಸೇರಿಸಿ. ಮಿಶ್ರಣ ದಪ್ಪವಾಗುವವರೆಗೆ ಚೆನ್ನಾಗಿ ಕೈ ಆಡಿಸಿ. ಗ್ರೀಸ್ ಮಾಡಿದ ತಟ್ಟೆಯಲ್ಲಿ ಪುಡ್ಡಿಂಗ್ ಅನ್ನು ಹಾಕಿ, ಕನಿಷ್ಠ 2 ಗಂಟೆಗಳ ಕಾಲ ಫ್ರಿಜ್‌ನಲ್ಲಿಡಿ. ನಂತರ ತುರಿದ ತೆಂಗಿನಕಾಯಿ ಅಥವಾ ಬಾದಾಮಿಯಿಂದ ಅಲಂಕರಿಸಿ, ರುಚಿಕರವಾದ ತೆಂಗಿನಕಾಯಿ ಪುಡ್ಡಿಂಗ್ ಸವಿಯಲು ಸಿದ್ದ.