Thursday, September 4, 2025

FOOD | ತೆಂಗಿನಕಾಯಿ, ಟೊಮಾಟೊ ಚಟ್ನಿ ತಿಂದು ಬೋರಾಗಿದ್ರೆ ಒಮ್ಮೆ ಪೇರಳೆ ಹಣ್ಣಿನ ಚಟ್ನಿ ಟ್ರೈ ಮಾಡಿ!

ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ವಿಭಿನ್ನ ರುಚಿಯ ಪೇರಳೆ ಹಣ್ಣಿನ ಚಟ್ನಿ ಒಂದ್ಸಲ ಟ್ರೈ ಮಾಡ್ಲೇಬೇಕು. ಬಜ್ಜಿ, ಪಕೋಡಾ, ದೋಸೆ, ಚಪಾತಿ ಅಥವಾ ಅನ್ನದ ಜೊತೆ ಸೈಡ್ ಡಿಶ್ ಆಗಿ ಮಾತ್ರವಲ್ಲ, ಡಿಪ್ಪಿಂಗ್ ಸಾಸ್ ಅಥವಾ ಸ್ಪ್ರೆಡ್ ಆಗಿಯೂ ಬಳಸಬಹುದಾದ ಈ ಚಟ್ನಿ, ಪೌಷ್ಟಿಕಾಂಶದಲ್ಲೂ ಹೇರಳವಾಗಿದೆ.

ಬೇಕಾಗುವ ಪದಾರ್ಥಗಳು:
ಮಾಗಿದ ಪೇರಳೆ ಹಣ್ಣು – 4-5
ಸಕ್ಕರೆ – 1 ಕಪ್
ಉಪ್ಪು – ಅರ್ಧ ಟೀಸ್ಪೂನ್
ಚಿಲ್ಲಿ ಫ್ಲೇಕ್ಸ್ – 1 ಟೀಸ್ಪೂನ್
ತುರಿದ ಶುಂಠಿ – 1 ಟೀಸ್ಪೂನ್
ಜೀರಿಗೆ – ಅರ್ಧ ಟೀಸ್ಪೂನ್
ಸಾಸಿವೆ – ಅರ್ಧ ಟೀಸ್ಪೂನ್
ಅರಿಶಿನ ಪುಡಿ – ಕಾಲು ಟೀಸ್ಪೂನ್
ಹಿಂಗ್ – ಚಿಟಿಕೆ
ಎಣ್ಣೆ – 1 ಟೀಸ್ಪೂನ್
ನೀರು – ಕಾಲು ಕಪ್

ಮಾಡುವ ವಿಧಾನ:

ಮೊದಲಿಗೆ ಪೇರಳೆ ಹಣ್ಣುಗಳನ್ನು ತೊಳೆದು, ಸಿಪ್ಪೆ ಮತ್ತು ಬೀಜಗಳನ್ನು ತೆಗೆದು ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ, ಪೇರಳೆ ತುಂಡುಗಳನ್ನು ಮೃದುವಾಗುವವರೆಗೆ ಬೇಯಿಸಬೇಕು.

ಇನ್ನೊಂದು ಪ್ಯಾನ್‌ನಲ್ಲಿ ಸಾಸಿವೆ, ಜೀರಿಗೆ ಮತ್ತು ಮೆಂತ್ಯವನ್ನು ಪರಿಮಳ ಬರುವವರೆಗೆ ಹುರಿದು ತಣ್ಣಗಾಗಿಸಿ ನಂತರ ಒರಟಾಗಿ ಪುಡಿ ಮಾಡಿಕೊಳ್ಳಿ.

ನಂತರ ಚಿಲ್ಲಿ ಫ್ಲೇಕ್ಸ್‌ನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದ ಬಳಿಕ, ಅದೇ ಬಾಣಲೆಯಲ್ಲಿ ಕತ್ತರಿಸಿದ ಈರುಳ್ಳಿಯನ್ನು ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ನಂತರ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಬೇಕು. ಈಗ ಬೇಯಿಸಿದ ಪೇರಳೆ, ಮಸಾಲೆ ಪುಡಿ, ಸಕ್ಕರೆ, ಉಪ್ಪು ಹಾಗೂ ವಿನೆಗರ್ ಸೇರಿಸಿ, ಚಟ್ನಿ ಗಟ್ಟಿಯಾಗುವವರೆಗೆ ಬೇಯಿಸಬೇಕು. ತಣ್ಣಗಾದ ನಂತರ ಗಾಳಿಯಾಡದ ಡಬ್ಬಿಯಲ್ಲಿ ತುಂಬಿ ಫ್ರಿಜ್‌ನಲ್ಲಿ ಇಟ್ಟರೆ ಹಲವು ವಾರಗಳವರೆಗೆ ಸವಿಯಬಹುದು.

ಇದನ್ನೂ ಓದಿ