Sunday, October 5, 2025

FOOD | ವಿಜಯದಶಮಿಯಂದು ಸ್ಪೆಷಲ್ ಸಿಹಿತಿನಿಸು ಮಾಡ್ಬೇಕು ಅಂತಿದ್ರೆ ಚಂಪಾಕಲಿ ಟ್ರೈ ಮಾಡಿ

ಹಬ್ಬದ ದಿನಗಳಲ್ಲಿ ಸಿಹಿತಿನಿಸುಗಳು ವಿಶೇಷ ಪ್ರಾಮುಖ್ಯತೆ ಪಡೆಯುತ್ತವೆ. ವಿಶೇಷವಾಗಿ ವಿಜಯದಶಮಿ ಹಬ್ಬದ ಸಂಭ್ರಮದಲ್ಲಿ ಮನೆಯಲ್ಲಿಯೂ ಸಿಹಿತಿನಿಸುಗಳನ್ನು ತಯಾರಿಸಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಸಂಪ್ರದಾಯ. ಹೀಗಾಗಿ ಇವತ್ತು ನಾವು ತುಂಬಾ ವಿಶೇಷವಾದ ಚಂಪಾಕಲಿ ಮಾಡೋದು ಹೇಗೆ ಅಂತ ನೋಡೋಣ.

ಬೇಕಾಗುವ ಸಾಮಗ್ರಿಗಳು:

ಹಾಲು – 1 ಲೀಟರ್
ನಿಂಬೆ ಹಣ್ಣು – ಅರ್ಧ
ಮೈದಾ ಹಿಟ್ಟು – 1 ಟೀ ಸ್ಪೂನ್
ಸಕ್ಕರೆ – 1 ಕಪ್
ನೀರು – 1.5 ಕಪ್
ಸ್ವೀಟ್ ಖೋವಾ – ಸ್ವಲ್ಪ
ಚರ‍್ರಿ ಹಣ್ಣು – ಸ್ವಲ್ಪ
ಹಾಲಿನ ಪುಡಿ – ಸ್ವಲ್ಪ
ಏಲಕ್ಕಿ ಪುಡಿ – ಸ್ವಲ್ಪ
ಕೇಸರಿ – ಸ್ವಲ್ಪ

ತಯಾರಿಸುವ ವಿಧಾನ:

ಮೊದಲಿಗೆ ಹಾಲನ್ನು ಕಾಯಿಸಿ. ಅದಕ್ಕೆ ಅರ್ಧ ನಿಂಬೆಹಣ್ಣಿನ ರಸವನ್ನು ಸ್ವಲ್ಪ ಸ್ವಲ್ಪ ಹಾಕಿ ಹಾಲು ಒಡೆಯುವವರೆಗೆ ಕೈಯಾಡಿಸಿ. ಹಾಲು ಒಡೆಯಾದ ನಂತರ, ಕಾಟನ್ ಬಟ್ಟೆಯಲ್ಲಿ ಸೋಸುವ ಮೂಲಕ ನೀರನ್ನು ಬೇರ್ಪಡಿಸಿ.

ಬೇರ್ಪಡಿಸಿದ ಹಾಲಿನ ಪನೀರ್ ಮತ್ತು ಮೈದಾ ಹಿಟ್ಟನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ನೀರು ಸೇರಿಸಿ ಹಿಟ್ಟನ್ನು ನಯವಾಗಿ ಬೆರೆಸಿಕೊಳ್ಳಿ.ಈ ಹಿಟ್ಟನ್ನು ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ.

ಬಾಣಲೆಯಲ್ಲಿ 4 ಕಪ್ ನೀರು ಮತ್ತು ಸಕ್ಕರೆ ಸೇರಿಸಿ ಕಡಿಮೆ ಉರಿಯಲ್ಲಿ 10 ನಿಮಿಷ ಕುದಿಯಲು ಬಿಡಿ. ಸಕ್ಕರೆ ಪಾಕ ಸಿದ್ಧವಾದ ಬಳಿಕ, ಚಂಪಾಕಲಿ ಉಂಡೆಗಳನ್ನು ಸಿರಪ್‌ನಲ್ಲಿ ಹಾಕಿ 12–15 ನಿಮಿಷ ಬೇಯಿಸಿ. ಬೇಯಿಸಿದ ಚಂಪಾಕಲಿಯನ್ನು ಪ್ಲೇಟ್‌ನಲ್ಲಿ ತೆಗೆದುಕೊಂಡು ತಣ್ಣಗಾಗಲು ಬಿಡಿ.

ಈಗ ಹಿಸುಕಿದ ಖೋವಾ, ಸಕ್ಕರೆ, ಹಾಲಿನ ಪುಡಿ, ಏಲಕ್ಕಿ ಪುಡಿ ಮತ್ತು ಕೇಸರಿ ಹಾಲನ್ನು ಮಿಶ್ರಣ ಮಾಡಿ. ತಣ್ಣಗಾದ ಚಂಪಾಕಲಿಯ ಮಧ್ಯ ಭಾಗವನ್ನು ಕಟ್ ಮಾಡಿ, ತಯಾರಿಸಿದ ಮಿಶ್ರಣವನ್ನು ತುಂಬಿ. ಎಲ್ಲ ಚಂಪಾಕಲಿಯನ್ನು ಚರ‍್ರಿಯಿಂದ ಅಲಂಕರಿಸಿ.