April 5, 2026
Sunday, April 5, 2026
spot_img

FOOD | ಕೇವಲ 5 ನಿಮಿಷ ಸಾಕು ಈ ಮಜ್ಜಿಗೆ ಸಾರು ರೆಡಿ ಮಾಡೋಕೆ

ಈ ಬೇಸಿಗೆಯ ಬಿಸಿಲಲ್ಲಿ ಮಧ್ಯಾಹ್ನ ಊಟಕ್ಕೆ ಏನಾದರೂ ಲೈಟ್, ತಂಪು ಮತ್ತು ಹೊಟ್ಟೆಗೆ ಹಿತವಾದದ್ದು ಬೇಕು ಅನಿಸಿದರೆ, ಮಜ್ಜಿಗೆ ಸಾರು ಸೂಪರ್ ಆಯ್ಕೆ. ಅನ್ನದ ಜೊತೆ ರುಚಿ ಹೆಚ್ಚಾಗುತ್ತದೆ, ದೇಹಕ್ಕೂ ತಂಪು ಕೊಡುತ್ತದೆ. ವಿಶೇಷವಾಗಿ ಬಿಸಿಲಿನಿಂದ ದಣಿದ ದಿನಗಳಲ್ಲಿ ಈ ಸಿಂಪಲ್ ರೆಸಿಪಿ ಒಮ್ಮೆ ಟ್ರೈ ಮಾಡಿದರೆ ಮತ್ತೆ ಮತ್ತೆ ಮಾಡ್ತೀರಾ.

ಬೇಕಾಗುವ ಪದಾರ್ಥಗಳು

ಮಜ್ಜಿಗೆ – 2 ಕಪ್
ನೀರು – 1/2 ಕಪ್
ಶುಂಠಿ – ಸಣ್ಣ ತುಂಡು
ಹಸಿಮೆಣಸಿನಕಾಯಿ – 1
ಕರಿಬೇವು – 6 ರಿಂದ 8 ಎಲೆ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಸಾಸಿವೆ – 1/2 ಟೀ ಸ್ಪೂನ್
ಜೀರಿಗೆ – 1/2 ಟೀ ಸ್ಪೂನ್
ಒಣ ಮೆಣಸಿನಕಾಯಿ – 1
ಎಣ್ಣೆ – 1 ಟೀ ಸ್ಪೂನ್
ಹಿಂಗು – ಚಿಟಿಕೆ

ಮಾಡುವ ವಿಧಾನ

ಮೊದಲು ಒಂದು ಬೌಲ್‌ನಲ್ಲಿ ಮಜ್ಜಿಗೆಗೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕಲೆಸಿ.

ಮಿಕ್ಸಿ ಜಾರಿನಲ್ಲಿ ಶುಂಠಿ, ಹಸಿಮೆಣಸಿನಕಾಯಿ, ಸ್ವಲ್ಪ ಕರಿಬೇವು ಮತ್ತು ಕೊತ್ತಂಬರಿ ಹಾಕಿ ಒಮ್ಮೆ ರಫ್ ಆಗಿ ಗ್ರೈಂಡ್ ಮಾಡಿ. ಇದನ್ನು ಮಜ್ಜಿಗೆಗೆ ಸೇರಿಸಿ ಉಪ್ಪು ಹಾಕಿ ಚೆನ್ನಾಗಿ ಕಲಸಿ.

ಈಗ ಒಂದು ಸಣ್ಣ ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಜೀರಿಗೆ, ಒಣ ಮೆಣಸಿನಕಾಯಿ, ಹಿಂಗು ಮತ್ತು ಕರಿಬೇವು ಹಾಕಿ ಒಗ್ಗರಣೆ ತಯಾರಿಸಿ.

ಈ ಒಗ್ಗರಣೆಯನ್ನು ಮಜ್ಜಿಗೆ ಮಿಶ್ರಣದ ಮೇಲೆ ಹಾಕಿ ಚೆನ್ನಾಗಿ ಕಲಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !