ಹೊಸದಿಗಂತ ವರದಿ, ಚಿತ್ರದುರ್ಗ:
ಹುಬ್ಬಳ್ಳಿ ಗಲಭೆ ಪರಕರಣದಲ್ಲಿ ಬಂಧಿತರಾಗಿರುವ ಕುಟುಂಬ ವರ್ಗದವರಿಗೆ ಫುಡ್‌ಕಿಟ್ ನೀಡುವುದು ಭಯೋತ್ಪಾದಕರಿಗೆ ಸಹಕಾರ ನೀಡಿದಂತೆ ಎಂದು ಕೃಷಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಚಿಕ್ಕಬೆನ್ನೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಫುಡ್‌ಕಿಟ್ ನೀಡುವಂತಹ ಸ್ಥಿತಿ ನಿರ್ಮಾಣ ಆಗಿಲ್ಲ. ಸರ್ಕಾರದಿಂದ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಅಕ್ಕಿ, ರಾಗಿ ನೀಡಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದಲೂ ಆಹಾರಧಾನ್ಯ ನೆರವು ನೀಡಲಾಗುತ್ತಿದೆ ಎಂದರು.
ಆದರೆ ಜಮೀರ್ ಅಹಮದ್ ಹುಬ್ಬಳ್ಳಿ ಗಲಭೆಕೋರರ ಕುಟುಂಬದವರಿಗೆ ಫುಡ್ ಕಿಟ್ ವಿತರಣೆ ಮಾಡುವುದು ದುರದೃಷ್ಠಕರ ಸಂಗತಿ. ಫುಡ್ ಕಿಟ್ ವಿತರಣೆ ಮಾಡುವುದರಿಂದ ಗಲಭೆಕೋರರಿಗೆ ಪ್ರಚೋದನೆ ನೀಡಿದಂತಾಗುತ್ತದೆ. ಹಾಗಾಗಿ ಜಮೀರ್ ಅಹಮದ್ ಕಾರ್ಯ ವೈಖರಿ ಸರಿಯಲ್ಲ ಎಂದು ಆಕ್ಷೇಪಿಸಿದರು.