ರಾತ್ರಿ ಊಟಕ್ಕೆ ತುಂಬಾ ಹೆವಿ ಫುಡ್ ಬದಲು ಲೈಟ್ ಆಗಿ, ಆರೋಗ್ಯಕರವಾಗಿ ಏನಾದರೂ ಬೇಕೆಂದಾಗ ಬಟಾಣಿ ಸೂಪ್ ಟ್ರೈ ಮಾಡಿ. ಬಟಾಣಿಯಲ್ಲಿ ಪ್ರೋಟೀನ್, ಫೈಬರ್ ಮತ್ತು ವಿಟಮಿನ್ಸ್ ಚೆನ್ನಾಗಿ ಇರುತ್ತವೆ. ಹೊಟ್ಟೆಗೆ ಲೈಟ್ ಆಗಿ, ರುಚಿಗೆ ಸೂಪರ್ ಆಗಿರುವ ಈ ಸೂಪ್ ಡಿನ್ನರ್‌ಗೆ ಬೆಸ್ಟ್.
ಬೇಕಾಗುವ ಪದಾರ್ಥಗಳು:
ಹಸಿರು ಬಟಾಣಿ – 1 ಕಪ್
ಈರುಳ್ಳಿ – 1 ಸಣ್ಣದು
ಬೆಳ್ಳುಳ್ಳಿ – 3 ಕಳಿ
ಶುಂಠಿ – ಸಣ್ಣ ತುಂಡು
ಬೆಣ್ಣೆ ಅಥವಾ ಎಣ್ಣೆ – 1 ಟೀ ಸ್ಪೂನ್
ನೀರು – 2 ಕಪ್
ಹಾಲು – ¼ ಕಪ್ (ಐಚ್ಛಿಕ)
ಉಪ್ಪು – ರುಚಿಗೆ ತಕ್ಕಷ್ಟು
ಮೆಣಸು ಪುಡಿ – ½ ಟೀ ಸ್ಪೂನ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಮಾಡುವ ವಿಧಾನ:
ಮೊದಲು ಒಂದು ಪಾತ್ರೆಯಲ್ಲಿ ಬೆಣ್ಣೆ ಅಥವಾ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿ ಹಾಕಿ ಸ್ವಲ್ಪ ಸಾಫ್ಟ್ ಆಗುವವರೆಗೆ ಫ್ರೈ ಮಾಡಿ.
ಈಗ ಬಟಾಣಿ ಹಾಕಿ 2 ನಿಮಿಷ ಚೆನ್ನಾಗಿ ಕಲಸಿ. ನಂತರ 2 ಕಪ್ ನೀರು ಹಾಕಿ ಮುಚ್ಚಿ 8–10 ನಿಮಿಷ ಬೇಯಿಸಿ. ಬಟಾಣಿ ಚೆನ್ನಾಗಿ ಸಾಫ್ಟ್ ಆದ ಮೇಲೆ ಗ್ಯಾಸ್ ಆಫ್ ಮಾಡಿ ಸ್ವಲ್ಪ ತಣ್ಣಗಾಗಲು ಬಿಡಿ.
ಈ ಮಿಶ್ರಣವನ್ನು ಮಿಕ್ಸಿಯಲ್ಲಿ ಗ್ರೈಂಡ್ ಮಾಡಿ ಸ್ಮೂತ್ ಪೇಸ್ಟ್ ಮಾಡಿಕೊಳ್ಳಿ. ಮತ್ತೆ ಪಾತ್ರೆಗೆ ಹಾಕಿ, ಬೇಕಾದಷ್ಟು ನೀರು ಅಥವಾ ಹಾಲು ಸೇರಿಸಿ 2 ನಿಮಿಷ ಕುದಿಸಿ. ಕೊನೆಯಲ್ಲಿ ಉಪ್ಪು ಮತ್ತು ಮೆಣಸು ಪುಡಿ ಸೇರಿಸಿ.
ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿ ಸರ್ವ್ ಮಾಡಿ. ಗಾರ್ಲಿಕ್ ಬ್ರೆಡ್ ಜೊತೆ ರಾತ್ರಿ ಊಟಕ್ಕೆ ಸಖತ್ ರುಚಿ ಕೊಡುತ್ತದೆ.



