September 30, 2026
Wednesday, September 30, 2026
spot_img

FOOD | ರಾತ್ರಿ ಊಟಕ್ಕೆ ಲೈಟ್ & ಟೇಸ್ಟಿ ಬಟಾಣಿ ಸೂಪ್: ಒಮ್ಮೆ ಟ್ರೈ ಮಾಡಿ

ರಾತ್ರಿ ಊಟಕ್ಕೆ ತುಂಬಾ ಹೆವಿ ಫುಡ್ ಬದಲು ಲೈಟ್ ಆಗಿ, ಆರೋಗ್ಯಕರವಾಗಿ ಏನಾದರೂ ಬೇಕೆಂದಾಗ ಬಟಾಣಿ ಸೂಪ್ ಟ್ರೈ ಮಾಡಿ. ಬಟಾಣಿಯಲ್ಲಿ ಪ್ರೋಟೀನ್, ಫೈಬರ್ ಮತ್ತು ವಿಟಮಿನ್ಸ್ ಚೆನ್ನಾಗಿ ಇರುತ್ತವೆ. ಹೊಟ್ಟೆಗೆ ಲೈಟ್ ಆಗಿ, ರುಚಿಗೆ ಸೂಪರ್ ಆಗಿರುವ ಈ ಸೂಪ್ ಡಿನ್ನರ್‌ಗೆ ಬೆಸ್ಟ್.

ಬೇಕಾಗುವ ಪದಾರ್ಥಗಳು:

ಹಸಿರು ಬಟಾಣಿ – 1 ಕಪ್
ಈರುಳ್ಳಿ – 1 ಸಣ್ಣದು
ಬೆಳ್ಳುಳ್ಳಿ – 3 ಕಳಿ
ಶುಂಠಿ – ಸಣ್ಣ ತುಂಡು
ಬೆಣ್ಣೆ ಅಥವಾ ಎಣ್ಣೆ – 1 ಟೀ ಸ್ಪೂನ್
ನೀರು – 2 ಕಪ್
ಹಾಲು – ¼ ಕಪ್ (ಐಚ್ಛಿಕ)
ಉಪ್ಪು – ರುಚಿಗೆ ತಕ್ಕಷ್ಟು
ಮೆಣಸು ಪುಡಿ – ½ ಟೀ ಸ್ಪೂನ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಾಡುವ ವಿಧಾನ:

ಮೊದಲು ಒಂದು ಪಾತ್ರೆಯಲ್ಲಿ ಬೆಣ್ಣೆ ಅಥವಾ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿ ಹಾಕಿ ಸ್ವಲ್ಪ ಸಾಫ್ಟ್ ಆಗುವವರೆಗೆ ಫ್ರೈ ಮಾಡಿ.

ಈಗ ಬಟಾಣಿ ಹಾಕಿ 2 ನಿಮಿಷ ಚೆನ್ನಾಗಿ ಕಲಸಿ. ನಂತರ 2 ಕಪ್ ನೀರು ಹಾಕಿ ಮುಚ್ಚಿ 8–10 ನಿಮಿಷ ಬೇಯಿಸಿ. ಬಟಾಣಿ ಚೆನ್ನಾಗಿ ಸಾಫ್ಟ್ ಆದ ಮೇಲೆ ಗ್ಯಾಸ್ ಆಫ್ ಮಾಡಿ ಸ್ವಲ್ಪ ತಣ್ಣಗಾಗಲು ಬಿಡಿ.

ಈ ಮಿಶ್ರಣವನ್ನು ಮಿಕ್ಸಿಯಲ್ಲಿ ಗ್ರೈಂಡ್ ಮಾಡಿ ಸ್ಮೂತ್ ಪೇಸ್ಟ್ ಮಾಡಿಕೊಳ್ಳಿ. ಮತ್ತೆ ಪಾತ್ರೆಗೆ ಹಾಕಿ, ಬೇಕಾದಷ್ಟು ನೀರು ಅಥವಾ ಹಾಲು ಸೇರಿಸಿ 2 ನಿಮಿಷ ಕುದಿಸಿ. ಕೊನೆಯಲ್ಲಿ ಉಪ್ಪು ಮತ್ತು ಮೆಣಸು ಪುಡಿ ಸೇರಿಸಿ.

ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿ ಸರ್ವ್ ಮಾಡಿ. ಗಾರ್ಲಿಕ್ ಬ್ರೆಡ್ ಜೊತೆ ರಾತ್ರಿ ಊಟಕ್ಕೆ ಸಖತ್ ರುಚಿ ಕೊಡುತ್ತದೆ.

Must Read