FOOD | ಬೆಳಗ್ಗಿನ ತಿಂಡಿಗೆ ತಯಾರಿಸಿ ರುಚಿಕರವಾದ ಮೆಂತ್ಯ ರೈಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗ್ಗಿನ ತಿಂಡಿಗೆ ರುಚಿಕರವಾದ ಖಾದ್ಯ ಸೇವಿಸಲು ಎಲ್ಲರೂ ಇಷ್ಟ ಪಡುತ್ತಾರೆ. ಮನೆಯಲ್ಲಿ ಮಕ್ಕಳಿದರಂತೂ ಏನಪ್ಪಾ ಮಾಡೋದು ತಿಂಡಿ ಅನ್ನೋ ತಲೆನೋವು. ಆದರೆ ಕೆಲವೊಮ್ಮೆ ಮಕ್ಕಳು ಹಸಿರು ತರಕಾರಿ, ಸೊಪ್ಪು ಇವೆಲ್ಲ ತಿನ್ನೋಕೆ ಇಷ್ಟಪಡಲ್ಲ ಆಗ ಅದನ್ನ ಯೋಚ್ನೆ ಮಾಡಿ ಅಂತಹ ತರಕಾರಿ, ಸೊಪ್ಪಲ್ಲೇ ರುಚಿಯಾದ ಅಡುಗೆ ಮಾಡಬಹುದು. ಹಾಗಾದರೆ ಮೆಂತ್ಯ ರೈಸ್ ಮಾಡೋದು ಹೇಗೆ ಅಂತ ನೋಡೋಣ ಬನ್ನಿ…

ಮೆಂತ್ಯ ರೈಸ್- Kannada Prabha

ಬೇಕಾಗುವ ಪಧಾರ್ಥಗಳು:

ಮೆಂತ್ಯೆ ಸೊಪ್ಪು- 1 ಕಪ್
ಈರುಳ್ಳಿ- 1
ಶುಂಠಿ, ಬೆಳುಳ್ಳಿ ಪೇಸ್ಟ್ – 1 ಚಮಚ
ಟೊಮ್ಯಾಟೋ- 2
ದನಿಯಾ ಪುಡಿ- 1 ಚಮಚ
ಖಾರದ ಪುಡಿ- 1 ಚಮಚ
ಜೀರಿಗೆ ಪುಡಿ-೧/೨ ಚಮಚ
ಬಟಾಣಿ- 1 ಕಪ್
ಅಕ್ಕಿ- 1 ಕಪ್
ನೀರು-2 1/2 ಕಪ್

Instant Pot Methi Pulao (Methi Rice Recipe) - Easy Indian Cookbook

ಮೆಂತ್ಯ ರೈಸ್ ಮಾಡುವ ವಿಧಾನ:

ಮೊದಲು ಕುಕ್ಕರಿನಲ್ಲಿ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿಯನ್ನು ಹಾಕಿ ಅದು ಹಸಿ ವಾಸನೆ ಹೋಗುವವರೆಗೆ ಹುರಿದು ನಂತರ ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಸ್ವಲ್ಪ ಸಮಯದ ನಂತರ ಮೆಂತ್ಯೆ ಸೊಪ್ಪು, ಬಟಾಣಿ ಹಾಕಿ 3 ನಿಮಿಷ ಕೈ ಆಡಿಸಿ ನಂತರ ಅದಕ್ಕೆ ಹಚ್ಚಿದ ಟೊಮ್ಯಾಟೋ ಸೇರಿಸಿ.
ಟೊಮ್ಯಾಟೋ ಸರಿಯಾಗಿ ಬೆಂದ ನಂತರ ಜೀರಿಗೆ, ದನಿಯಾ ಪುಡಿ, ಅರಿಶಿನ, ಅಚ್ಚಖಾರದ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ ಒಂದು ನಿಮಿಷ ಕುದಿಸಿ.
ನಂತರ ಈಗ ಅಕ್ಕಿಯನ್ನು ಹಾಕಿ, ನೀರನ್ನು ಸೇರಿಸಿ ಮುಚ್ಚಳ ಮುಚ್ಚಿ. ಕುಕ್ಕರ್ 2 ವಿಷಲ್ ಬಂದಮೇಲೆ ಸ್ಟೌ ಆಫ್ ಮಾಡಿ, ವಿಷಲ್ ಹೋದ ನಂತರ ಅದನ್ನು ಒಂದು ಪ್ಲೇಟ್ ಅಥವಾ ಬೌಲ್ ನಲ್ಲಿ ಬಡಿಸಿ. ಬಿಸಿ ಬಿಸಿ ಮೆಂತ್ಯೆ ರೈಸ್ ಮನೆಮಂದಿ ಜೊತೆ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!