September 2, 2026
Wednesday, September 2, 2026
spot_img

FOOD | ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಸ್ಟೈಲ್ ಕ್ರೀಮಿ ಚೀಸ್ ಪಾಸ್ತಾ.. ರುಚಿ ಮಾತ್ರ ನೆಕ್ಸ್ಟ್ ಲೆವೆಲ್!

ಸಂಜೆ ಆಗ್ತಿದ್ದ ಹಾಗೆ ಏನಾದ್ರೂ ಬಿಸಿಬಿಸಿಯಾಗಿ, ಯಮ್ಮಿಯಾಗಿ ತಿನ್ನಬೇಕು ಅನ್ನಿಸ್ತಾ ಇದ್ಯಾ? ಹಾಗಿದ್ರೆ ಇನ್ಯಾಕೆ ತಡ ಈ ಕ್ರೀಮಿ ಚೀಸ್ ಪಾಸ್ತಾ ಟ್ರೈ ಮಾಡಿ ನೋಡಿ:

ಪಾಸ್ತಾ

ಬೆಣ್ಣೆ

ಮೈದಾ ಹಿಟ್ಟು

ಹಾಲು

ಚೀಸ್

ಬೆಳ್ಳುಳ್ಳಿ

ತರಕಾರಿಗಳು

ಚಿಲ್ಲಿ ಫ್ಲೇಕ್ಸ್

ಓರೆಗಾನೋ

ಬ್ಲಾಕ್ ಪೆಪ್ಪರ್

ಉಪ್ಪು ಮತ್ತು ಎಣ್ಣೆ

ಮೊದಲಿಗೆ ಒಂದು ಪಾತ್ರೆಯಲ್ಲಿ 4 ಕಪ್ ನೀರು ಹಾಕಿ, ಅದಕ್ಕೆ ಸ್ವಲ್ಪ ಉಪ್ಪು ಮತ್ತು 1 ಚಮಚ ಎಣ್ಣೆ ಹಾಕಿ ಕುದಿಯಲು ಬಿಡಿ. ನೀರು ಕುದಿ ಬಂದಾಗ ಪಾಸ್ತಾ ಹಾಕಿ ಬೇಯಿಸಿಕೊಳ್ಳಿ. ನಂತರ ನೀರನ್ನು ಬಸದು, ಪಾಸ್ತಾ ಮೇಲೆ ತಣ್ಣೀರು ಹಾಕಿ ಪಕ್ಕಕ್ಕೆ ಇಡಿ.

ಈಗ ಒಂದು ಬಾಣಲೆಗೆ 1 ಚಮಚ ಬೆಣ್ಣೆ ಹಾಕಿ, ಹೆಚ್ಚಿದ ಬೆಳ್ಳುಳ್ಳಿ ಹಾಕಿ ಹುರಿಯಿರಿ. ನಂತರ ನಿಮಗಿಷ್ಟವಾದ ತರಕಾರಿಗಳನ್ನು ಹಾಕಿ 2-3 ನಿಮಿಷ ಸಣ್ಣ ಉರಿಯಲ್ಲಿ ಹುರಿದು ಬೇರೆ ತಟ್ಟೆಗೆ ತೆಗೆದಿಟ್ಟುಕೊಳ್ಳಿ. ತರಕಾರಿಗಳು ಪೂರ್ತಿ ಬೇಯಬಾರದು, ಕ್ರಂಚಿಯಾಗಿರಬೇಕು. ಈಗ ಅದೇ ಬಾಣಲೆಗೆ 2 ದೊಡ್ಡ ಚಮಚ ಬೆಣ್ಣೆ ಹಾಕಿ ಕರಗಿಸಿ. ಅದಕ್ಕೆ 2 ಚಮಚ ಮೈದಾ ಹಿಟ್ಟು ಹಾಕಿ ಸಣ್ಣ ಉರಿಯಲ್ಲಿ 1 ನಿಮಿಷ ಹುರಿಯಿರಿ. ಗಂಟಾಗದಂತೆ ಕೈಯಾಡಿಸುತ್ತಾ ಕಾಯಿಸಿದ ಹಾಲನ್ನು ಸ್ವಲ್ಪ ಸ್ವಲ್ಪವೇ ಸೇರಿಸಿ. ಸಾಸ್ ಗಟ್ಟಿಯಾಗುವವರೆಗೆ ಸಣ್ಣ ಉರಿಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ.

ಸಾಸ್ ಕ್ರೀಮಿ ಆದ ತಕ್ಷಣ, ಅದಕ್ಕೆ ಹುರಿದು ಇಟ್ಟುಕೊಂಡ ತರಕಾರಿಗಳು, ಚಿಲ್ಲಿ ಫ್ಲೇಕ್ಸ್, ಓರೆಗಾನೋ, ಪೆಪ್ಪರ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ನಂತರ ತುರಿದ ಚೀಸ್ ಹಾಕಿ ಚೆನ್ನಾಗಿ ಕರಗುವವರೆಗೆ ಕೈಯಾಡಿಸಿ.

ಕೊನೆಯಲ್ಲಿ ಬೇಯಿಸಿಟ್ಟ ಪಾಸ್ತಾ ಹಾಕಿ, ವೈಟ್ ಸಾಸ್ ಎಲ್ಲಾ ಪಾಸ್ತಾಗೆ ಚೆನ್ನಾಗಿ ಹಿಡಿಯುವಂತೆ ಮಿಕ್ಸ್ ಮಾಡಿ. 1 ನಿಮಿಷ ಬೇಯಿಸಿದರೆ ಬಿಸಿ ಬಿಸಿಯಾದ, ಬಾಯಲ್ಲಿ ನೀರೂರಿಸುವ ಕ್ರೀಮಿ ಚೀಸ್ ಪಾಸ್ತಾ ಸವಿಯಲು ಸಿದ್ಧ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !