Wednesday, September 24, 2025

FOOD | ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಸ್ಟೈಲ್ ನವಾಬಿ ಪನೀರ್! ರೆಸಿಪಿ ಇಲ್ಲಿದೆ

ಪನೀರ್ ಭಾರತೀಯ ಅಡುಗೆಯಲ್ಲಿ ಶತಮಾನಗಳಿಂದಲೂ ಪ್ರಮುಖ ಸ್ಥಾನ ಪಡೆದಿರುವ ಒಂದು ಆಹಾರ ಪದಾರ್ಥ. ಹಾಲಿನಿಂದ ತಯಾರಾಗುವ ಪನೀರ್ ಅನ್ನು ಸಾಮಾನ್ಯವಾಗಿ “ಇಂಡಿಯನ್ ಚೀಸ್” ಎಂದು ಕರೆಯುತ್ತಾರೆ. ರಾಜಮನೆತನದ ಅಡುಗೆಯಲ್ಲಿ ಬಳಸುವ ನವಾಬಿ ಪನೀರ್ ತನ್ನ ವಿಶಿಷ್ಟ ರುಚಿಯಿಂದ ಪ್ರಸಿದ್ಧವಾಗಿದೆ. ಇಂದು ನಾವು ನವಾಬಿ ಪನೀರ್ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ.

ಬೇಕಾಗುವ ಪದಾರ್ಥಗಳು:

ಹೆಚ್ಚಿದ ಈರುಳ್ಳಿ – ¾ ಕಪ್
ಹಸಿರು ಮೆಣಸಿನಕಾಯಿ – 4
ಬೆಳ್ಳುಳ್ಳಿ – 6 ಕಾಯಿ
ಶುಂಠಿ – ½ ಇಂಚು
ಬಾದಾಮಿ – 8
ಗೋಡಂಬಿ – 6-7
ಗಸೆಗಸೆ – 1 ಟೀಸ್ಪೂನ್
ತುಪ್ಪ – 4 ಟೀಸ್ಪೂನ್
ಪನೀರ್ – 1½ ಕಪ್ (ಕ್ಯೂಬ್‌ಗಳು)
ದಾಲ್ಚಿನ್ನಿ ಎಲೆ – 1
ದಾಲ್ಚಿನ್ನಿ ಚಕ್ಕೆ – 1 ಇಂಚು
ಏಲಕ್ಕಿ – 2
ಲವಂಗ – 3
ಜೀರಿಗೆ – ½ ಟೀಸ್ಪೂನ್
ಮೊಸರು – ¼ ಕಪ್
ಹಾಲು – 1 ಕಪ್
ಕೇಸರಿ ಎಳೆ – ಕೆಲವು
ಹಾಲು – 2 ಟೀಸ್ಪೂನ್
ಫ್ರೆಶ್ ಕ್ರೀಮ್ – 2 ಟೀಸ್ಪೂನ್
ಕರಿ ಮೆಣಸಿನ ಪುಡಿ – ½ ಟೀಸ್ಪೂನ್
ಕಸೂರಿ ಮೇಥಿ – ½ ಟೀಸ್ಪೂನ್
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಮೊದಲು ಬೆಚ್ಚಗಿನ ಹಾಲಿನಲ್ಲಿ ಕೇಸರಿ ಎಳೆಗಳನ್ನು ಹಾಕಿ ಮಿಶ್ರಣ ಮಾಡಿ ಪಕ್ಕಕ್ಕೆ ಇಡಿ.

ಒಂದು ಬಾಣಲೆಯಲ್ಲಿ ಈರುಳ್ಳಿ, ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ, ಬಾದಾಮಿ, ಗೋಡಂಬಿ, ಗಸೆಗಸೆ ಮತ್ತು 1 ಕಪ್ ನೀರು ಹಾಕಿ 10 ನಿಮಿಷ ಕುದಿಸಿ. ತಣ್ಣಗಾದ ಬಳಿಕ ಪೇಸ್ಟ್ ಮಾಡಿ ಇಡಿ.

ಪ್ಯಾನ್‌ನಲ್ಲಿ 1 ಟೀಸ್ಪೂನ್ ತುಪ್ಪ ಬಿಸಿ ಮಾಡಿ, ಪನೀರ್ ಕ್ಯೂಬ್‌ಗಳನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ. ಪಕ್ಕಕ್ಕೆ ಇಡಿ.

ಇನ್ನೊಂದು ಬಾಣಲೆಯಲ್ಲಿ ಉಳಿದ ತುಪ್ಪ ಹಾಕಿ ಬಿಸಿ ಮಾಡಿ, ದಾಲ್ಚಿನ್ನಿ ಎಲೆ, ಚಕ್ಕೆ, ಏಲಕ್ಕಿ, ಲವಂಗ, ಜೀರಿಗೆ ಹಾಕಿ ಸ್ವಲ್ಪ ಹುರಿಯಿರಿ. ಈಗ ತಯಾರಿಸಿದ ಪೇಸ್ಟ್ ಹಾಗೂ ಮೊಸರು ಸೇರಿಸಿ 3-4 ನಿಮಿಷ ಬೇಯಿಸಿ. ಬಳಿಕ ಹಾಲು, ಕೇಸರಿ ಹಾಲಿನ ಮಿಶ್ರಣ, ಕ್ರೀಮ್, ಕರಿ ಮೆಣಸಿನ ಪುಡಿ, ಕಸೂರಿ ಮೇಥಿ ಸೇರಿಸಿ ಚೆನ್ನಾಗಿ ಕಲಸಿ 2 ನಿಮಿಷ ಬೇಯಿಸಿ. ಈಗ ಹುರಿದ ಪನೀರ್ ಮತ್ತು ಉಪ್ಪು ಸೇರಿಸಿ, 5 ನಿಮಿಷ ಬೇಯಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿಬಿಸಿಯಾಗಿ ಬಡಿಸಿ.

ಇದನ್ನೂ ಓದಿ