FOOD | ಮೊಳಕೆಕಾಳು ಇಷ್ಟ ಇಲ್ಲ ಅನ್ನೋರಿಗೆ ಈ ಪಡ್ಡು ಮಾಡಿಕೊಡಿ! ಇದ್ರ ರುಚಿಗೆ ಮತ್ತೆ ಮತ್ತೆ ಕೇಳ್ತಾರೆ

ಮೊಳಕೆಕಾಳುಗಳನ್ನು ತಿನ್ನುವುದು ನಮ್ಮ ಆರೋಗ್ಯಕ್ಕೆ ಬಹಳ ಉತ್ತಮ. ಆದರೆ ಅದನ್ನು ಹಸಿಯಾಗಿಯೇ ತಿನ್ನುವುದನ್ನು ಹೆಚ್ಚಿನವರು ಇಷ್ಟ ಪಡುವುದಿಲ್ಲ. ಹೀಗಾಗಿ ಇವತ್ತು ನಾವು ಮೊಳಕೆಕಾಳಿನಿಂದ ರುಚಿಯಾದ ಪಡ್ಡು ತಯಾರಿಸುವುದು ಹೇಗೆ ಅಂತ ನೋಡೋಣ.

ಬೇಕಾಗುವ ಸಾಮಗ್ರಿಗಳು

ನೆನೆಸಿ ಮೊಳಕೆ ಬರಿಸಿದ ಕಾಳು – ಎರಡು ಕಪ್
ನಿಮ್ಮ ಇಷ್ಟದ ಸೊಪ್ಪು – 2 ಕಪ್‌
ಕಡಲೆಹಿಟ್ಟು – 1ಕಪ್‌
ಶುಂಠಿ – 1 ಸಣ್ಣ ತುಂಡು
ನೀರು
ಖಾರದಪುಡಿ – 1ಟೀ ಚಮಚ
ಹುರಿದ ಜೀರಿಗೆ ಪುಡಿ – 2 ಟೀ ಚಮಚ
ಉಪ್ಪು– ರುಚಿಗೆ ತಕ್ಕಷ್ಟು
ತುಪ್ಪ ಅಥವಾ ಎಣ್ಣೆ – ಸ್ವಲ್ಪ
ಬೇಕಿಂಗ್ ಪುಡಿ ಅಥವಾ ಬೇಕಿಂಗ್ ಸೋಡಾ

ಮಾಡುವ ವಿಧಾನ:

ಮೊದಲು ಒಂದು ಮಿಕ್ಸಿ ಜಾರಿಗೆ ಮೊಳಕೆ ಬರಿಸಿದ ಕಾಳುಗಳು, ಸೊಪ್ಪು, ಕಡಲೆಹಿಟ್ಟು ಹಾಗೂ ಶುಂಠಿ ಹಾಗೂ ನೀರು ಸೇರಿಸಿ ರುಬ್ಬಿ ನಯವಾದ ಪೇಸ್ಟ್‌ ತಯಾರಿಸಿ.

ಈಗ ಈ ಮಿಶ್ರಣಕ್ಕೆ ಖಾರದ ಪುಡಿ, ಹುರಿದ ಜೀರಿಗೆ ಪುಡಿ, ಅಡಿಗೆ ಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಈಗ ಪಡ್ಡು ಪ್ಯಾನ್ ಬಿಸಿ ಮಾಡಿ, ಅದಕ್ಕೆ ತುಪ್ಪ ಅಥವಾ ಎಣ್ಣೆ ಸವರಿ. ಅದಕ್ಕೆ ಹಿಟ್ಟಿನ ಮಿಶ್ರಣ ಹಾಕಿ. ಇದನ್ನು ಸ್ವಲ್ಪ ಹೊತ್ತು ಬೇಯಿಸಿ, ನಂತರ ಇನ್ನೊಂದು ಬದಿಯನ್ನು ಕಾಯಿಸಿದರೆ ಪಡ್ಡು ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!