ಬೇಕಾಗುವ ಸಾಮಾಗ್ರಿ:
1 ಮೂಲಂಗಿ
1 ಕ್ಯಾರೆಟ್
ಅರ್ಧ ಕಟ್ಟು ಮೆಂತೆಸೊಪ್ಪು
ಸ್ವಲ್ಪ ಜೀರಿಗೆ
2 ಕಪ್ ಗೋಧಿಹಿಟ್ಟು ಸ್ವಲ್ಪ ನೀರು
ಉಪ್ಪು
ಮಾಡುವ ವಿಧಾನ:
ಕ್ಯಾರೆಟ್ ಮತ್ತು ಮೂಲಂಗಿಯನ್ನು ಚೆನ್ನಾಗಿ ತೊಳೆಯಿರಿ ಮತ್ತು ಮೇಲಿನ ಸಿಪ್ಪೆಯನ್ನು ತೆಗೆದುಹಾಕಿ.
ಒಂದು ಪಾತ್ರೆಯಲ್ಲಿ ಗೋಧಿಹಿಟ್ಟು ಹಾಕಿ ಅದಕ್ಕೆ ತುರಿದ ಕ್ಯಾರೆಟ್, ಮೂಲಂಗಿ, ಕತ್ತರಿಸಿದ ಮೆಂತ್ಯ ಸೊಪ್ಪು, 1 ಚಮಚ ಜೀರಿಗೆ, ಉಪ್ಪು (ರುಚಿಗೆ ತಕ್ಕಷ್ಟು) ಮತ್ತು ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ನೀವು 30 ನಿಮಿಷಗಳ ಕಾಲ ನಿಲ್ಲುವ ಅಗತ್ಯವಿಲ್ಲ, ಚಪಾತಿ ಲಟ್ಟಿಸಿ ಅದನ್ನು ಬಿಸಿ ಮಾಡಿದರೆ ರುಚಿಕರವಾದ ತರಕಾರಿ ಚಪಾತಿ ಸಿದ್ಧ.