ಬೇಕಾಗುವ ಸಾಮಗ್ರಿಗಳು:
* ದಪ್ಪ ಅವಲಕ್ಕಿ – 1 ಕಪ್
* ಈರುಳ್ಳಿ – 1/2 ಕಪ್
* ಹಸಿರು ಮೆಣಸಿನಕಾಯಿ – 1/4 ಕಪ್
* ಕೊತ್ತಂಬರಿ ಸೊಪ್ಪು – 1/4 ಕಪ್
* ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1/2 ಟೀಸ್ಪೂನ್
* ಕೆಂಪು ಮೆಣಸಿನ ಪುಡಿ – 1/2 ಟೀಸ್ಪೂನ್
* ಅರಿಶಿನ ಪುಡಿ – 1/4 ಟೀಸ್ಪೂನ್
* ಇಂಗು – 1/4 ಟೀಸ್ಪೂನ್
* ಉಪ್ಪು – ರುಚಿಗೆ ತಕ್ಕಷ್ಟು
* ಎಣ್ಣೆ
ಮಾಡುವ ವಿಧಾನ:
ಅವಲಕ್ಕಿಯನ್ನು ನೀರಿನಲ್ಲಿ ತೊಳೆದು 5 ನಿಮಿಷ ನೆನೆಸಿ. ನೀರನ್ನು ಬಸಿದು ಪಕ್ಕಕ್ಕೆ ಇಡಿ. ಒಂದು ಬಟ್ಟಲಿನಲ್ಲಿ ನೆನೆಸಿದ ಅವಲಕ್ಕಿ, ಈರುಳ್ಳಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಇಂಗು ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಒಂದು ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ. ಅವಲಕ್ಕಿ ಮಿಶ್ರಣದಿಂದ ಸ್ವಲ್ಪ ಸ್ವಲ್ಪ ತೆಗೆದುಕೊಂಡು ಸಣ್ಣ ಉಂಡೆ ರೀತಿ ಮಾಡಿ. ಬಿಸಿ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಮತ್ತು ಕ್ರಿಸ್ಪಿಯಾಗುವವರೆಗೆ ಕರಿಯಿರಿ. ಕರಿಯಲಾದ ಪಕೋಡಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಇಡಿ. ಚಟ್ನಿ ಅಥವಾ ಸಾಸ್‌ನೊಂದಿಗೆ ಬಿಸಿ ಬಿಸಿಯಾದ ಗರಿಗರಿಯಾದ ಪಕೋಡ ಸವಿಯಲು ಸಿದ್ದ.