ಹಬ್ಬ, ಸಂಭ್ರಮ, ವಿಶೇಷ ಸಂದರ್ಭಗಳೆಂದರೆ ಸಿಹಿ ತಿಂಡಿಗಳು ಸವಿಯಾದ ನೆನಪನ್ನು ತರುತ್ತವೆ. ಉತ್ತರ ಭಾರತದ ಪ್ರಖ್ಯಾತ ಸಿಹಿತಿನಿಸುಗಳಲ್ಲಿ ಒಂದಾದ ಗುಜ್ಜಿಯಾ ತುಂಬಿದ ರುಚಿಕರ ತಿಂಡಿಯಾಗಿದೆ.
ಬೇಕಾಗುವ ಸಾಮಗ್ರಿಗಳು:
ಮೈದಾ ಹಿಟ್ಟು – 1 ಕಪ್
ಬೆಣ್ಣೆ ಅಥವಾ ಎಣ್ಣೆ – 2 ಟೀಸ್ಪೂನ್
ತುಪ್ಪ – ಬೇಕಾದಷ್ಟು
ಖೋವಾ – 200 ಗ್ರಾಂ
ಹುರಿದ ಬಾದಾಮಿ/ಪಿಸ್ತಾ/ಗೋಡಂಬಿ ಇತ್ಯಾದಿ – 1/2 ಕಪ್
ಸಕ್ಕರೆ – 1 ಕಪ್
ಏಲಕ್ಕಿ ಪುಡಿ – ಸ್ವಲ್ಪ
ಮಾಡುವ ವಿಧಾನ:
ಮೊದಲಿಗೆ ಮೈದಾ ಹಿಟ್ಟಿಗೆ ಬೆಣ್ಣೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಅಗತ್ಯವಿರುವಷ್ಟು ನೀರು ಸೇರಿಸಿ, ಗಟ್ಟಿಯಾದ ಹಿಟ್ಟನ್ನು ತಯಾರಿಸಿ ಮತ್ತು ಅರ್ಧ ಗಂಟೆ ಮುಚ್ಚಿಟ್ಟು ಬಿಡಿ.
ಖೋವಾವನ್ನು ಸ್ವಲ್ಪ ತುಪ್ಪದಲ್ಲಿ ಹುರಿದುಕೊಳ್ಳಿ. ಇದಕ್ಕೆ ಸಕ್ಕರೆ, ಹುರಿದು ಪುಡಿಮಾಡಿದ ಗೋಡಂಬಿ, ಬಾದಾಮಿ, ಪಿಸ್ತಾ ಹಾಗೂ ಏಲಕ್ಕಿ ಪುಡಿ ಸೇರಿಸಿ.
ತಯಾರಿಸಿದ ಹಿಟ್ಟನ್ನು ಪುಟ್ಟ ಚಪಾತಿಗಳಂತೆ ಲಟ್ಟಿಸಿ, ಮಧ್ಯದಲ್ಲಿ ಹೂರಣ ಹಾಕಿ ಅರ್ಧಚಂದ್ರ ಆಕಾರಕ್ಕೆ ಮುಚ್ಚಿ, ಅಂಚುಗಳನ್ನು ಒತ್ತಿ. ಕಡಿಮೆ ಉರಿಯಲ್ಲಿ ತುಪ್ಪ ಅಥವಾ ಎಣ್ಣೆಯಲ್ಲಿ ಹುರಿದರೆ ಗುಜ್ಜಿಯಾ ರೆಡಿ.