ಉತ್ತರ ಕರ್ನಾಟಕ ಅಡುಗೆಯ ಸಿಂಪಲ್ ರುಚಿ ಅಂದ್ರೆ ತಕ್ಷಣ ನೆನಪಾಗೋದು ಹೆಸರು ಕಾಳು ಪಲ್ಯ. ಕಡಿಮೆ ಪದಾರ್ಥಗಳಲ್ಲಿ, ಹೆಚ್ಚು ಪೌಷ್ಟಿಕತೆಯೇ ಈ ಪಲ್ಯದ ವಿಶೇಷತೆ. ಜೋಳದ ರೊಟ್ಟಿ, ರಾಗಿ ಮುದ್ದೆ ಅಥವಾ ಅನ್ನದ ಜೊತೆ ಈ ಪಲ್ಯ ಅಂದ್ರೆ ಊಟ ಪೂರ್ಣವಾದ ಅನುಭವ ಕೊಡುತ್ತದೆ.
ಬೇಕಾಗುವ ಸಾಮಗ್ರಿಗಳು
ಹೆಸರು ಕಾಳು – 1 ಕಪ್ (ನೆನೆಸಿ, ಬೇಯಿಸಿಕೊಂಡದ್ದು)
ಈರುಳ್ಳಿ – 1
ಹಸಿಮೆಣಸು – 2
ಬೆಳ್ಳುಳ್ಳಿ – 4–5 ಹಣ್ಣು
ಕರಿಬೇವು – ಸ್ವಲ್ಪ
ಸಾಸಿವೆ – 1 ಚಮಚ
ಜೀರಿಗೆ – 1/2 ಚಮಚ
ಅರಿಶಿನ – 1/4 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ
ಮೊದಲು ಹೆಸರು ಕಾಳನ್ನು ಚೆನ್ನಾಗಿ ತೊಳೆಯಿ, 6–8 ಗಂಟೆ ನೆನೆಸಿಟ್ಟು ಪ್ರೆಶರ್ ಕುಕ್ಕರ್‌ನಲ್ಲಿ ಮೃದುವಾಗುವಷ್ಟು ಬೇಯಿಸಿಕೊಳ್ಳಿ. ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ ಹಾಕಿ ಚಿಟಿಕಿಸಿದ ನಂತರ ಕರಿಬೇವು ಮತ್ತು ಬೆಳ್ಳುಳ್ಳಿ ಸೇರಿಸಿ. ಸುಗಂಧ ಬರುವವರೆಗೂ ಸ್ವಲ್ಪ ಹುರಿಯಿರಿ.
ಅನಂತರ ಈರುಳ್ಳಿ ಹಾಗೂ ಹಸಿಮೆಣಸು ಸೇರಿಸಿ ಹುರಿಯಬೇಕು. ಈಗ ಅರಿಶಿನ, ಉಪ್ಪು ಹಾಕಿ ಬೇಯಿಸಿದ ಹೆಸರು ಕಾಳು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ 5–7 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ ಗ್ಯಾಸ್ಆಫ್ ಮಾಡಿ.
ಈ ಉತ್ತರ ಕರ್ನಾಟಕ ಸ್ಟೈಲ್ ಹೆಸರು ಕಾಳು ಪಲ್ಯ ಆರೋಗ್ಯಕರವೂ ರುಚಿಕರವೂ ಆಗಿದ್ದು, ಸರಳ ಊಟಕ್ಕೆ ಬೆಸ್ಟ್ ಸೈಡ್ ಡಿಷ್.



