April 10, 2026
Friday, April 10, 2026
spot_img

FOOD | ಮನೆಯಲ್ಲೇ ತಯಾರಾಗುತ್ತೆ ರಾಯಲ್ ಫಲೂಡ: ಸ್ವಲ್ಪ ಟೈಮ್ ಬೇಕು ಅಷ್ಟೆ

ಯುಗಾದಿ ಅಥವಾ ಯಾವುದೇ ವಿಶೇಷ ಸಂದರ್ಭಗಳಲ್ಲಿ ತಿನ್ನೋಕೆ ತಂಪಾದ, ಸಿಹಿಯಾದ ಡೆಸರ್ಟ್ ಇಲ್ಲಾಂದ್ರೆ ಹೇಗೆ ಅಲ್ವ? ಈಗ ಸೆಕೆ ಬೇರೆ.. ಅದಕ್ಕೆ ಕೂಲ್ ಕೂಲ್ ಆಗಿರೋ ರಾಯಲ್ ಫಲೂಡ ಮನೆಯಲ್ಲೇ ಮಾಡಿ. ಬಣ್ಣ ಬಣ್ಣದ ಪದಾರ್ಥಗಳ ಜೊತೆಗೆ ಸಿಹಿ ರುಚಿ ನೀಡುವ ಈ ಫಲೂಡ ಮಕ್ಕಳು ದೊಡ್ಡವರು ಎಲ್ಲರಿಗೂ ಇಷ್ಟವಾಗುತ್ತೆ. ಮನೆಯಲ್ಲೇ ಸುಲಭವಾಗಿ ಹೇಗೆ ಮಾಡುವುದು ನೋಡೋಣ.

ಬೇಕಾಗುವ ಪದಾರ್ಥಗಳು:

ಫಲೂಡ ಶ್ಯಾವಿಗೆ – 1 ಕಪ್
ಹಾಲು – 2 ಕಪ್
ಸಕ್ಕರೆ – 3-4 ಟೇಬಲ್ ಸ್ಪೂನ್
ರೋಸ್ ಸಿರಪ್ – 2 ಟೇಬಲ್ ಸ್ಪೂನ್
ಸಬ್ಜಾ ಬೀಜ – 2 ಟೀ ಸ್ಪೂನ್ (ನೀರಿನಲ್ಲಿ ನೆನೆಸಿದ್ದು)
ಐಸ್ ಕ್ರೀಮ್ (ವ್ಯಾನಿಲ್ಲಾ/ಸ್ಟ್ರಾಬೆರಿ) – 2 ಸ್ಕೂಪ್
ಬಾದಾಮಿ, ಗೋಡಂಬಿ, ಪಿಸ್ತಾ – ಕತ್ತರಿಸಿದದ್ದು
ಜಿಲೇಟಿನ್ ಅಥವಾ ಜೆಲ್ಲಿ

ಮಾಡುವ ವಿಧಾನ:

ಮೊದಲು ಫಲೂಡ ಶ್ಯಾವಿಗೆಯನ್ನು ನೀರಿನಲ್ಲಿ ಬೇಯಿಸಿ ತಣ್ಣಗಾಗಲು ಬಿಡಿ.

ಸಬ್ಜಾ ಬೀಜವನ್ನು 10 ನಿಮಿಷ ನೀರಿನಲ್ಲಿ ನೆನೆಸಿಡಿ.

ಹಾಲಿಗೆ ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ ಫ್ರಿಜ್‌ನಲ್ಲಿ ತಣ್ಣಗಾಗಲು ಇಡಿ.

ಗ್ಲಾಸ್‌ನಲ್ಲಿ ಮೊದಲು ರೋಸ್ ಸಿರಪ್ ಹಾಕಿ, ನಂತರ ಸಬ್ಜಾ ಬೀಜ, ಫಲೂಡ ಶ್ಯಾವಿಗೆ ಸೇರಿಸಿ.

ಮೇಲಿನಿಂದ ತಣ್ಣನೆಯ ಹಾಲು ಹಾಕಿ.

ನಂತರ ಐಸ್ ಕ್ರೀಮ್ ಸ್ಕೂಪ್ ಹಾಕಿ, ಡ್ರೈಫ್ರೂಟ್ಸ್ ಹಾಕಿ ಅಲಂಕರಿಸಿ.

ತಕ್ಷಣ ತಂಪಾಗಿಯೇ ಸರ್ವ್ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !