October 7, 2026
Wednesday, October 7, 2026
spot_img

HEALTH | ಐಸ್‌ಕ್ರೀಂ ದೇಹವನ್ನು ಇನ್ನಷ್ಟು ಬಿಸಿಮಾಡಿಬಿಡತ್ತೆ, ಸಮ್ಮರ್‌ನಲ್ಲಿ ಇದನ್ನು ತಿನ್ಲೇಬೇಡಿ!

ಸಮ್ಮರ್‌ನ ಬಿಸಿಲಿಗೆ ಮೊದಲು ತಿನ್ನಬೇಕು ಅನ್ನಿಸೋದೇ ಐಸ್‌ಕ್ರೀಂ. ವಿಭಿನ್ನ ಫ್ಲೇವರ್‌ನ ವಿಭಿನ್ನ ರೀತಿಯ ಐಸ್‌ಕ್ರೀಂಗಳನ್ನು ತಿನ್ನೋದಕ್ಕೆ ಆಸೆಯಾಗುತ್ತದೆ. ಬಿಸಿಲಿಗೆ ದಾಹವಾದರೂ ಅದೇ ಬೇಕು ಅನ್ನಿಸುತ್ತದೆ. ಆದರೆ ಬೇಸಿಗೆಯಲ್ಲಿ ಇದನ್ನು ಅವಾಯ್ಡ್‌ ಮಾಡಿದಷ್ಟು ಬೆಸ್ಟ್‌. ಯಾಕೆ ನೋಡಿ..

ಐಸ್‌ಕ್ರೀಂಗಳನ್ನು ಫ್ಯಾಟ್‌ ಹಾಗೂ ಶುಗರ್‌ ಜಾಸ್ತಿ ಇರುತ್ತದೆ. ಇದು ನಿಮ್ಮ ದೇಹಕ್ಕೆ, ಜೀರ್ಣ ಮಾಡುವ ಅಂಗಗಳಿಗೆ ಸಮಸ್ಯೆ ನೀಡುತ್ತದೆ. ಇನ್ನು ಹೆಚ್ಚು ಕ್ಯಾಲೋರಿಗಳಿರುವ ಐಸ್‌ಕ್ರೀಂ ನಿಮ್ಮ ದೇಹಕ್ಕೆ ಹೆವಿ ಫೀಲಿಂಗ್‌ ನೀಡುತ್ತದೆ. ಇದು ಕೊಡುವ ಕೂಲಿಂಗ್‌ ಎಫೆಕ್ಟ್‌ ಕ್ಷಣಿಕವಾದದ್ದು. ದೇಹ ಈ ಐಸ್‌ಕ್ರೀಂನ್ನು ಅರಗಿಸಿಕೊಳ್ಳೋದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಜೊತೆಗೆ ದೇಹವನ್ನು ಬಿಸಿ ಮಾಡುತ್ತದೆ. ಸಮ್ಮರ್‌ನಲ್ಲಿ ತೂಕ ಇಳಿಕೆ ಮಾಡುವ ಪ್ರಯತ್ನ ಮಾಡುತ್ತಿದ್ದರೆ ಐಸ್‌ಕ್ರೀಂನಿಂದ ದೂರ ಇರಿ.

Must Read