September 17, 2026
Thursday, September 17, 2026
spot_img

Food | ಸಖತ್ ಈಸಿ, ಸೂಪರ್ ಟೇಸ್ಟಿ.. ಬಾಯಲ್ಲಿ ನೀರೂರಿಸುವ ಬೆಂಡೆಕಾಯಿ ಮಜ್ಜಿಗೆ ಕೊಳುಂಬು!

ಬೆಂಡೆಕಾಯಿ

ಮೊಸರು

ತೆಂಗಿನಕಾಯಿ ತುರಿ

ಹಸಿಮೆಣಸಿನಕಾಯಿ

ಜೀರಿಗೆ

ಸಾಸಿವೆ

ಇಂಗು

ಒಣಮೆಣಸಿನಕಾಯಿ

ಕರಿಬೇವು, ಎಣ್ಣೆ, ಅರಿಶಿನ, ಉಪ್ಪು

ಮೊದಲಿಗೆ ತೆಂಗಿನಕಾಯಿ ತುರಿ, ಜೀರಿಗೆ ಮತ್ತು ಹಸಿಮೆಣಸಿನಕಾಯಿಗೆ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಪಕ್ಕಕ್ಕೆ ಇಟ್ಟುಕೊಳ್ಳಿ. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಹೆಚ್ಚಿದ ಬೆಂಡೆಕಾಯಿಯನ್ನು ನಾಲೈದು ನಿಮಿಷ ಚೆನ್ನಾಗಿ ಹುರಿಯಿರಿ. ಬೆಂಡೆಕಾಯಿಯ ಲೋಳೆ ರಸ ಪೂರ್ತಿ ಹೋಗಿ, ಅದು ಬೆಂದ ಮೇಲೆ ತಟ್ಟೆಗೆ ತೆಗೆದಿಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ಗಟ್ಟಿ ಮೊಸರನ್ನು ಸ್ವಲ್ಪ ನೀರು, ಉಪ್ಪು ಮತ್ತು ಅರಿಶಿನ ಹಾಕಿ ಚೆನ್ನಾಗಿ ಮಸೆಯಿರಿ. ನಂತರ ರುಬ್ಬಿದ ತೆಂಗಿನಕಾಯಿ ಮಸಾಲೆಯನ್ನು ಇದಕ್ಕೆ ಸೇರಿಸಿ ಮಿಕ್ಸ್ ಮಾಡಿ. ಈಗ ಹುರಿದ ಬೆಂಡೆಕಾಯಿಯನ್ನು ಈ ಮಜ್ಜಿಗೆ ಮಿಶ್ರಣಕ್ಕೆ ಹಾಕಿ ಸಣ್ಣ ಉರಿಯಲ್ಲಿ 2-3 ನಿಮಿಷ ಬಿಸಿ ಮಾಡಿ. ಕೊನೆಯಲ್ಲಿ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಇಂಗು, ಒಣಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ ಹುಳಿಗೆ ಸೇರಿಸಿದರೆ, ಬೆಂಡೆಕಾಯಿ ಮಜ್ಜಿಗೆ ಕೊಳುಂಬು ರೆಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !