March 30, 2026
Monday, March 30, 2026
spot_img

FOOD | ಮಧ್ಯಾಹ್ನ ಊಟಕ್ಕೆ ಸೂಪರ್ ಸೈಡ್ ಡಿಶ್: ಇಲ್ಲಿದೆ ನೋಡಿ ಕ್ಯಾಪ್ಸಿಕಂ ಮೊಸರು ಬಜ್ಜಿ ರೆಸಿಪಿ

ಮಧ್ಯಾಹ್ನ ಅನ್ನ–ಸಾಂಬಾರ್, ಪಲ್ಯ ಅಥವಾ ಚಪಾತಿಯ ಜೊತೆ ಸವಿಯಲು ತುಂಬಾ ರುಚಿಯಾದ ಮತ್ತು ಸುಲಭವಾದ ಸೈಡ್ ಡಿಶ್ ಅಂದ್ರೆ ಕ್ಯಾಪ್ಸಿಕಂ ಮೊಸರು ಬಜ್ಜಿ. ಸ್ವಲ್ಪ ಖಾರ, ಸ್ವಲ್ಪ ಹುಳಿ ರುಚಿಯ ಈ ತಿನಿಸು ಈ ಸೆಕೆಗೆ ತಂಪು ನೋಡೋದ್ದಂತೂ ಖಂಡಿತ.

ಬೇಕಾಗುವ ಪದಾರ್ಥಗಳು

ಕ್ಯಾಪ್ಸಿಕಂ (ದಪ್ಪ ಮೆಣಸಿನಕಾಯಿ) – 1
ಮೊಸರು – ¾ ಕಪ್
ಎಣ್ಣೆ – 1 ರಿಂದ 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ತುರಿದ ತೆಂಗಿನಕಾಯಿ – 2 ರಿಂದ 3 ಟೇಬಲ್ ಚಮಚ
ಹಸಿರು ಮೆಣಸಿನಕಾಯಿ – 1 ಅಥವಾ 2
ಸಾಸಿವೆ – ½ ಟೀಸ್ಪೂನ್
ಶುಂಠಿ – ಸಣ್ಣ ತುಂಡು
ಎಣ್ಣೆ – 1 ಟೀಸ್ಪೂನ್
ಸಾಸಿವೆ – ½ ಟೀಸ್ಪೂನ್
ಕರಿಬೇವು – ಸ್ವಲ್ಪ
ಇಂಗು – ಒಂದು ಚಿಟಿಕೆ

ಮಾಡುವ ವಿಧಾನ

ಮೊದಲು ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ ಹಾಕಿ 4–5 ನಿಮಿಷ ಸ್ವಲ್ಪ ಹುರಿಯಿರಿ. ಅದು ತುಂಬಾ ಮೆತ್ತಗಾಗಬಾರದು, ಸ್ವಲ್ಪ ಕ್ರಂಚಿ ಆಗಿದ್ದರೆ ರುಚಿ ಹೆಚ್ಚು.

ಇದೀಗ ಮಿಕ್ಸಿಯಲ್ಲಿ ತೆಂಗಿನಕಾಯಿ, ಹಸಿಮೆಣಸಿನಕಾಯಿ, ಸಾಸಿವೆ ಮತ್ತು ಬೇಕಿದ್ದರೆ ಶುಂಠಿ ಹಾಕಿ ಸ್ವಲ್ಪ ನೀರಿನೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ.

ಒಂದು ಪಾತ್ರೆಯಲ್ಲಿ ಮೊಸರು ಹಾಕಿ ಚೆನ್ನಾಗಿ ಕಲಸಿ, ಅದಕ್ಕೆ ರುಬ್ಬಿದ ಮಸಾಲಾ, ಉಪ್ಪು ಮತ್ತು ಹುರಿದ ಕ್ಯಾಪ್ಸಿಕಂ ಸೇರಿಸಿ ಮಿಶ್ರಣ ಮಾಡಿ.

ಕೊನೆಯಲ್ಲಿ ಸಣ್ಣ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಕರಿಬೇವು ಮತ್ತು ಇಂಗಿನ ಒಗ್ಗರಣೆ ಮಾಡಿ ಬಜ್ಜಿಗೆ ಹಾಕಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !