July 3, 2026
Friday, July 3, 2026
spot_img

ಕೇರಳ ಚುನಾವಣಾ ಅಖಾಡಕ್ಕೆ ಇಳಿದ ರಾಹುಲ್ ಗಾಂಧಿ: ಬಿಜೆಪಿ, ಎಲ್‌ಡಿಎಫ್ ವಿರುದ್ಧ ವಾಗ್ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ವಿಧಾನ ಸಭಾ ಚುನಾವಣಾ ಅಖಾಡಕ್ಕೆ ಇಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಎಂಟ್ರಿ ನೀಡಿದ್ದು, ಬಿಜೆಪಿ ಹಾಗು ಎಲ್‌ಡಿಎಫ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪತ್ತನಂತಿಟ್ಟದಲ್ಲಿ ಮಾತನಾಡಿದ ಅವರು, ಬಿಜೆಪಿ ಪರೋಕ್ಷವಾಗಿ ಎಲ್‌ಡಿಎಫ್ ಗೆ ಬೆಂಬಲಿಸುತ್ತಿದೆ , ಹೀಗಾಗಿ ಈ ಚುನಾವಣೆ ಯುಡಿಎಫ್ ಮತ್ತು ಸಿಪಿಐ(ಎಂ)-ಬಿಜೆಪಿ ಮೈತ್ರಿಯ ನಡುವಿನ ಹೋರಾಟ ಎಂದು ಹೇಳಿದ್ದಾರೆ.

ನನ್ನ ಮೇಲೆ ದಾಳಿ ಮಾಡಲಾಗಿದ್ದು, 36 ಕೇಸ್ ಗಳೂ ಇವೆ.55 ಗಂಟೆಗಳ ಕಾಲ ನಿರಂತರ ವಿಚಾರಣೆಯನ್ನು ಎದುರಿಸಿದ್ದೇನೆ, ಆದರೆ ಕೇರಳದ ಮುಖ್ಯಮಂತ್ರಿಯ ಮೇಲೆ ಬಿಜೆಪಿ ಯಾವುದೇ ದಾಳಿ ನಡೆಸಿಲ್ಲ. ಎಲ್‌ಡಿಎಫ್ ನಾಯಕರ ವಿರುದ್ಧ ಯಾವುದೇ ಕ್ರಮ ಇಲ್ಲ ಎಂದು ಗಾಂಧಿ ಹೇಳಿದರು.

ಇದೇ ವೇಳೆ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡು ಶಬರಿಮಲೆ ವಿಚಾರ ಎತ್ತಿದ ರಾಹುಲ್ ಗಾಂಧಿ, ಪಾಲಕ್ಕಾಡ್‌ಗೆ ಭೇಟಿ ನೀಡಿದ್ದ ವೇಳೆ ಶಬರಿಮಲೆ ಪ್ರಕರಣದ ಕುರಿತು ಮೌನವಾಗಿದ್ದರು ಎಂದು ಟೀಕಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !