July 25, 2026
Saturday, July 25, 2026
spot_img

FOOD | ಅನ್ನ, ಸಾರು ಜೊತೆಗೆ ಈ ಮಹಾರಾಷ್ಟ್ರಿಯನ್ ಸ್ಟೈಲ್ ವಾಂಗಾಚಿ ಕಾಪಾ ಇದ್ರೆ ಸಾಕು, ಬೇರೇನೂ ಬೇಡ

ವಾಂಗಾಚಿ ಕಾಪಾ ಮಹಾರಾಷ್ಟ್ರ ಶೈಲಿಯ ಕ್ರಿಸ್ಪಿ ಬದನೆಕಾಯಿ ಫ್ರೈ ಆಗಿದ್ದು, ಚಪಾತಿ, ಅನ್ನ ಸಾರಿನ ಜೊತೆ ತುಂಬಾ ರುಚಿಯಾಗಿ ತಿನ್ನಬಹುದು. ಕಡಿಮೆ ಸಾಮಗ್ರಿಗಳಲ್ಲಿ ಸುಲಭವಾಗಿ ಮನೆಯಲ್ಲೇ ಮಾಡಬಹುದು.

ಬೇಕಾಗುವ ಸಾಮಗ್ರಿಗಳು

ದೊಡ್ಡ ಬದನೆಕಾಯಿ – 1 ರಿಂದ 2
ಅಕ್ಕಿ ಹಿಟ್ಟು ಅಥವಾ ರವೆ – ½ ಕಪ್
ಖಾರದ ಪುಡಿ – 1 ರಿಂದ 2 ಚಮಚ
ಅರಿಶಿನ ಪುಡಿ – ½ ಚಮಚ
ಧನಿಯಾ ಪುಡಿ – 1 ಚಮಚ
ಗರಂ ಮಸಾಲಾ – ½ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ನಿಂಬೆ ರಸ – ಸ್ವಲ್ಪ
ಎಣ್ಣೆ – ಫ್ರೈ ಮಾಡಲು

ತಯಾರಿಸುವ ವಿಧಾನ

ಮೊದಲು ಒಂದು ಬೌಲ್‌ನಲ್ಲಿ ಖಾರದ ಪುಡಿ, ಅರಿಶಿನ, ಧನಿಯಾ ಪುಡಿ, ಗರಂ ಮಸಾಲಾ, ಉಪ್ಪು ಮತ್ತು ನಿಂಬೆ ರಸ ಸೇರಿಸಿ ದಪ್ಪ ಮಸಾಲಾ ಪೇಸ್ಟ್ ತಯಾರಿಸಿ.

ಬದನೆಕಾಯಿಯನ್ನು ತೊಳೆದು 3–4 ಮಿ.ಮೀ ದಪ್ಪದ ಸ್ಲೈಸ್‌ಗಳಾಗಿ ಕತ್ತರಿಸಿ. ಕಪ್ಪಾಗದಂತೆ ನೀರಿನಲ್ಲಿ ಇಡಿ. ನಂತರ ನೀರನ್ನು ಒರೆಸಿ, ತಯಾರಿಸಿದ ಮಸಾಲೆಯನ್ನು ಎರಡೂ ಬದಿಗೆ ಚೆನ್ನಾಗಿ ಹಚ್ಚಿ.

ಮಸಾಲಾ ಹಚ್ಚಿದ ಸ್ಲೈಸ್‌ಗಳನ್ನು ರವೆ ಅಥವಾ ಅಕ್ಕಿ ಹಿಟ್ಟಿನಲ್ಲಿ ಚೆನ್ನಾಗಿ ಲೇಪಿಸಿಕೊಳ್ಳಿ. ತವೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಎರಡೂ ಬದಿಗಳು ಗರಿಗರಿಯಾಗುವವರೆಗೆ ಫ್ರೈ ಮಾಡಿ.

ಈ ಕ್ರಿಸ್ಪಿ ವಾಂಗಾಚಿ ಕಾಪಾ ಬಿಸಿ ಬಿಸಿ ಸರ್ವ್ ಮಾಡಿದರೆ ಲಂಚ್‌ಗೆ ಅದ್ಭುತ ರುಚಿ ನೀಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !