June 18, 2026
Thursday, June 18, 2026
spot_img

FOOD | ಆರೋಗ್ಯಕ್ಕೂ ಬೆಸ್ಟ್‌, ರುಚಿಯಲ್ಲೂ ಬೆಸ್ಟ್‌ ಈ ನುಗ್ಗೆ ಸೊಪ್ಪಿನ ಪಲ್ಯ

ನುಗ್ಗೆ ಸೊಪ್ಪಿನ ಪಲ್ಯ ಅತ್ಯಂತ ಆರೋಗ್ಯಕರವಾದ ಮತ್ತು ರುಚಿಕರವಾದ ಒಂದು ಖಾದ್ಯವಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಐರನ್ ಮತ್ತು ವಿಟಮಿನ್ ಸಿ ಹೇರಳವಾಗಿರುತ್ತದೆ ಹಾಗೂ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಮುಖ್ಯವಾಗಿ ಮಧುಮೇಹ ನಿಯಂತ್ರಿಸಲು ಇದು ಸಹಕಾರಿಯಾಗಿದೆ. ಇದನ್ನು ಬಹಳ ಸುಲಭವಾಗಿ ಮಾಡಬಹುದಾಗಿದೆ.

ಬೇಕಾಗುವ ಸಾಮಗ್ರಿಗಳು
ನುಗ್ಗೆ ಸೊಪ್ಪು
ಹೆಸರುಬೇಳೆ
ಈರುಳ್ಳಿ
ಒಣ ಮೆಣಸಿನಕಾಯಿ
ತೆಂಗಿನ ತುರಿ
ಎಣ್ಣೆ
ಸಾಸಿವೆ
ಜೀರಿಗೆ
ಉದ್ದಿನಬೇಳೆ
ಕಡ್ಲೆಬೇಳೆ
ಕರಿಬೇವು
ಉಪ್ಪು
ಬೆಲ್ಲ

ಮಾಡುವ ವಿಧಾನ:
ಮೊದಲು ನೆನೆಸಿದ ಹೆಸರುಬೇಳೆಯನ್ನು ಸ್ವಲ್ಪ ನೀರು ಹಾಕಿ ಮುಕ್ಕಾಲು ಭಾಗ ಬೇಯಿಸಿಕೊಳ್ಳಬೇಕು. ಬಳಿಕ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡ್ಲೆಬೇಳೆ, ಒಣ ಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಹುರಿಯಬೇಕು. ನಂತರ ಹೆಚ್ಚಿದ ಈರುಳ್ಳಿ ಸೇರಿಸಿ ಹೊಂಬಣ್ಣ ಬರುವವರೆಗೆ ಹುರಿಯಬೇಕು. ಬಳಿಕ ತೊಳೆದ ನುಗ್ಗೆ ಸೊಪ್ಪನ್ನು ಹಾಕಿ ಸ್ವಲ್ಪ ನೀರು ಚಿಮುಕಿಸಬೇಕು. ಸೊಪ್ಪು ಸರಿಯಾಗಿ ಬೆಂದ ಮೇಲೆ ಬೇಯಿಸಿದ ಹೆಸರುಬೇಳೆ, ಉಪ್ಪು ಮತ್ತು ತೆಂಗಿನ ತುರಿ ಸೇರಿಸಿ ಚೆನ್ನಾಗಿ ಬೆರೆಸಿ. 2 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದರೆ ಆರೋಗ್ಯಕರವಾದ ನುಗ್ಗೆ ಸೊಪ್ಪಿನ ಪಲ್ಯ ಸಿದ್ಧವಾಗುತ್ತದೆ. ಇದನ್ನು ಅನ್ನ, ಚಪಾತಿ, ಅಕ್ಕಿ ರೊಟ್ಟಿಯೊಂದಿಗೆ ಸೇವಿಸಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !