ಮಧ್ಯಾಹ್ನದ ಊಟಕ್ಕೆ ಅನ್ನ–ಸಾಂಬಾರ್ ಅಥವಾ ಅನ್ನ–ಮೊಸರಿನ ಜೊತೆ ವಿಭಿನ್ನವಾದ ಸೈಡ್ ಡಿಶ್ ಬೇಕಾದಾಗ ಮೂಲಂಗಿ ಚಟ್ನಿ ತುಂಬಾ ಒಳ್ಳೆಯ ಆಯ್ಕೆ. ಜೀರ್ಣಕ್ರಿಯೆಗೆ ಸಹಾಯ ಮಾಡುವ ಈ ಚಟ್ನಿ, ಮಾಡೋಕೆ ಜಾಸ್ತಿ ಟೈಮ್ ಬೇಕಾಗಿಲ್ಲ.
ಬೇಕಾಗುವ ಸಾಮಗ್ರಿಗಳು
ಮೂಲಂಗಿ ತುರಿ – 1 ಕಪ್
ಹಸಿಮೆಣಸು – 2
ಈರುಳ್ಳಿ – 1
ಬೆಳ್ಳುಳ್ಳಿ – 3 ರಿಂದ 4 ಕಾಯಿ
ಉದ್ದಿನ ಬೇಳೆ – 1 ಚಮಚ
ಕಡಲೆ ಬೇಳೆ – 1 ಚಮಚ
ತೆಂಗಿನಕಾಯಿ ತುರಿ – 2 ಚಮಚ
ಎಣ್ಣೆ – 2 ಚಮಚ
ಉಪ್ಪು – ರುಚಿಗೆ
ನೀರು – ಅಗತ್ಯಕ್ಕೆ ತಕ್ಕಷ್ಟು
ತಯಾರಿಸುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ ಸ್ವಲ್ಪ ಹುರಿಯಿರಿ. ನಂತರ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು ಸೇರಿಸಿ ಹಾಲು ಬಣ್ಣ ಬರುವವರೆಗೆ ಹುರಿಯಿರಿ. ಅದಕ್ಕೆ ತುರಿದ ಮೂಲಂಗಿ ಹಾಕಿ, ಹಸಿ ವಾಸನೆ ಹೋಗುವವರೆಗೆ ಬೇಯಿಸಿ.
ಕೊನೆಯಲ್ಲಿ ತೆಂಗಿನಕಾಯಿ ತುರಿ ಸೇರಿಸಿ ಸ್ವಲ್ಪ ಹೊತ್ತು ಹುರಿದ ಬಳಿಕ ತಣ್ಣಗೆ ಮಾಡಿ. ಈ ಮಿಶ್ರಣವನ್ನು ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಚನ್ನಾಗಿ ರುಬ್ಬಿ. ಕೊನೆಗೆ ಸಾಸಿವೆ, ಕರಿಬೇವು, ಒಣ ಮೆಣಸು ಹಾಕಿ ಒಗ್ಗರಣೆ ಹಾಕಿದರೆ ರುಚಿಕರವಾದ ಆರೋಗ್ಯಕರ ಮೂಲಂಗಿ ಚಟ್ನಿ ಸಿದ್ಧ.

