ಗಸಗಸೆ ಪಾಯಸ ಒಂದು ಪಾರಂಪರಿಕ ಸಿಹಿ. ಗಸಗಸೆಯ ರುಚಿ, ಹಾಲು ಮತ್ತು ಬೆಲ್ಲದ ರುಚಿಯ ಮಿಶ್ರಣ ಈ ಪಾಯಸವನ್ನು ಇನ್ನಷ್ಟು ಅದ್ಭುತಗೊಳಿಸುತ್ತದೆ. ಹಬ್ಬ, ಅಥವಾ ವಿಶೇಷ ಸಂದರ್ಭಗಳಲ್ಲಿ ಈ ಪಾಯಸ ತಯಾರಿಸುವ ಸಂಪ್ರದಾಯ ಹಲವು ಮನೆಗಳಲ್ಲಿ ಇಂದಿಗೂ ಮುಂದುವರಿದಿದೆ.
ಬೇಕಾಗುವ ಸಾಮಗ್ರಿಗಳು:
ಗೋಡಂಬಿ-ಸ್ವಲ್ಪ
ಬಾದಾಮಿ-ಸ್ವಲ್ಪ
ಕಪ್ ತೆಂಗಿನಕಾಯಿ- 1ಕಪ್
ಕಪ್ ಬೆಲ್ಲ- 1ಕಪ್
ಏಲಕ್ಕಿ ಪುಡಿ- ಸ್ವಲ್ಪ
ಗಸಗಸೆ- 2ಕಪ್
ತುಪ್ಪ- ಅರ್ಧ ಕಪ್
ಒಣದ್ರಾಕ್ಷಿ- ಸ್ವಲ್ಪ
ಮಾಡುವ ವಿಧಾನ:
ಮೊದಲಿಗೆ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ, ಗಸಗಸೆ, ಗೋಡಂಬಿ, ಬಾದಾಮಿ ಹಾಕಿ ಹುರಿದುಕೊಳ್ಳಿ. ಈ ಹುರಿದ ಪದಾರ್ಥಗಳನ್ನು ತೆಂಗಿನಕಾಯಿ ತುರಿ ಮತ್ತು ಸ್ವಲ್ಪ ನೀರಿನೊಂದಿಗೆ ಮಿಕ್ಸಿಯಲ್ಲಿ ರುಬ್ಬಿ ಮೃದುವಾದ ಪೇಸ್ಟ್ ತಯಾರಿಸಿ.
ಈಗ ಇನ್ನೊಂದು ಪಾತ್ರೆಯಲ್ಲಿ ತುಪ್ಪ ಹಾಕಿ, ಬೆಲ್ಲವನ್ನು ಕರಗಿಸಿ. ನಂತರ ಇದಕ್ಕೆ ತಯಾರಿಸಿದ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಬಹುದು.
ಮತ್ತೊಂದು ಬಾಣಲೆಗೆ ತುಪ್ಪ ಹಾಕಿ, ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ. ಹುರಿದ ಗೋಡಂಬಿ-ದ್ರಾಕ್ಷಿಯನ್ನು ಪಾಯಸಕ್ಕೆ ಸೇರಿಸಿ, ಏಲಕ್ಕಿ ಪುಡಿ ಹಾಕಿದರೆ ಬೆಲ್ಲದ ಗಸಗಸೆ ಪಾಯಸ ರೆಡಿ.