ಬೇಕಾಗುವ ಸಾಮಗ್ರಿಗಳು:
1 ಕಪ್ ಓಟ್ಸ್
1/2 ಕಪ್ ಮೈದಾ ಹಿಟ್ಟು
1/2 ಕಪ್ ಬೆಣ್ಣೆ
1/2 ಕಪ್ ಕಂದು ಸಕ್ಕರೆ
1/4 ಕಪ್ ಸಕ್ಕರೆ
1 ಮೊಟ್ಟೆ
1 ಟೀಸ್ಪೂನ್ ವೆನಿಲಾ ಎಸೆನ್ಸ್
1/2 ಟೀಸ್ಪೂನ್ ಬೇಕಿಂಗ್ ಸೋಡಾ
1/4 ಟೀಸ್ಪೂನ್ ಉಪ್ಪು
1/2 ಕಪ್ ಚಾಕೊಲೇಟ್ ಚಿಪ್ಸ್
1/4 ಕಪ್ ಡ್ರೈ ಫ್ರೂಟ್ಸ್
ಮಾಡುವ ವಿಧಾನ:
ಒಂದು ಬಟ್ಟಲಿನಲ್ಲಿ ಓಟ್ಸ್, ಮೈದಾ ಹಿಟ್ಟು, ಬೇಕಿಂಗ್ ಸೋಡಾ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇನ್ನೊಂದು ಬಟ್ಟಲಿನಲ್ಲಿ ಕರಗಿಸಿದ ಬೆಣ್ಣೆ, ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಮೊಟ್ಟೆ ಮತ್ತು ವೆನಿಲಾ ಎಸೆನ್ಸ್ ಸೇರಿಸಿ ಮಿಶ್ರಣ ಮಾಡಿ. ತೇವ ಪದಾರ್ಥಗಳ ಮಿಶ್ರಣಕ್ಕೆ ಡ್ರೈ ಫ್ರೂಟ್ಸ್ , ಚಾಕೊಲೇಟ್ ಚಿಪ್ಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಬೇಕಿಂಗ್ ಟ್ರೇನಲ್ಲಿ ಒಂದಕ್ಕೊಂದು ಅಂತರವಿರುವಂತೆ ಇಡಿ. ಪ್ರಿಹೀಟ್ ಮಾಡಿದ ಓವೆನ್ ನಲ್ಲಿ 10-12 ನಿಮಿಷಗಳ ಕಾಲ ಅಥವಾ ಕುಕೀಸ್ ಚಿನ್ನದ ಬಣ್ಣ ಬರುವವರೆಗೆ ಬೇಕ್ ಮಾಡಿ. ಚಾಕೊಲೇಟ್ ಚಿಪ್ಸ್ ಬದಲಿಗೆ, ನಿಮಗೆ ಬೇಕಾದ ಯಾವುದೇ ರೀತಿಯ ಚಾಕೊಲೇಟ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಬಳಸಬಹುದು. ಇದೀಗ ಓಟ್ಸ್ ಚಾಕೊಲೇಟ್ ಕುಕೀಸ್ ಸವಿಯಲು ಸಿದ್ಧ.