ಬೀಟ್‌ರೂಟ್ ಕಟ್ಲೆಟ್ ಒಂದು ರುಚಿಕರ ಮತ್ತು ಆರೋಗ್ಯಕರ ಸ್ನಾಕ್ಸ್ ಆಗಿದ್ದು, ಬಣ್ಣ, ರುಚಿ ಹಾಗೂ ಪೌಷ್ಟಿಕತೆಯಿಂದ ಕೂಡಿದ ಖಾದ್ಯವಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುವ ಈ ಕಟ್ಲೆಟ್, ತರಕಾರಿಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಲು ಒಂದು ಅತ್ಯುತ್ತಮ ವಿಧಾನವಾಗಿದೆ.
ಬೇಕಾಗುವ ಪದಾರ್ಥಗಳು:
ಬೀಟ್‌ರೂಟ್- 2
ರವೆ- 3 ಚಮಚ
ಈರುಳ್ಳಿ- 1 ದೊಡ್ಡ ಗಾತ್ರದ್ದು
ಶೆಜ್ವಾನ್ ಸಾಸ್- 2 ಚಮಚ
ಆಲೂಗಡ್ಡೆ- 2
ಮೈದಾ ಹಿಟ್ಟು- 1 ಬಟ್ಟಲು
ಅಕ್ಕಿ ಹಿಟ್ಟು- 4 ಚಮಚ
ಕಡಲೆಹಿಟ್ಟು- 4 ಚಮಚ
ಕಾರ್ನ್ ಫ್ಲೋರ್- 4 ಚಮಚ
ಕೊತ್ತೊಂಬರಿ ಸೊಪ್ಪು- ಸ್ವಲ್ಪ
ಉಪ್ಪು- ರುಚಿಗೆ ತಕ್ಕಷ್ಟು
ಜೀರಿಗೆ- ಒಂದು ಚಮಚ
ಎಣ್ಣೆ – ಕರಿಯಲು
ಬೆಣ್ಣೆ- 1 ಚಮಚ
ಮಾಡುವ ವಿಧಾನ:
ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು, ಪೇಸ್ಟ್ ರೀತಿ ಮಾಡಿ. ಇದಕ್ಕೆ ತುರಿದ ಬೀಟ್‌ರೂಟ್ ಹಾಕಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 15-20 ನಿಮಿಷ ಬಿಡಿ.
ನಂತರ ಅದಕ್ಕೆ ರವಾ, ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಕಾರ್ನ್ ಫ್ಲೋರ್ ಸೇರಿಸಿ ಮಿಶ್ರಣ ಮಾಡಿ. ಬಳಿಕ ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಣ್ಣೆ, ಕೊತ್ತೊಂಬರಿ ಸೊಪ್ಪು, ಜೀರಿಗೆ ಹಾಗೂ ಸಾಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಚಿಕ್ಕಚಿಕ್ಕ ಉಂಡೆ ಮಾಡಿ (ಕಬಾಬ್ ರೀತಿಯಲ್ಲಿ) ಕಾದ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿದರೆ ಬೀಟ್‌ರೂಟ್ ಕಬಾಬ್ ಸವಿಯಲು ಸಿದ್ಧ.