August 19, 2026
Wednesday, August 19, 2026
spot_img

FOOD | ಡಯೆಟ್ ನಲ್ಲಿದ್ರೂ ತಿನ್ಬಹುದು ಈ ಟೇಸ್ಟಿ ಸಿಹಿ ಗೆಣಸಿನ ಟಿಕ್ಕಿ!

ಡಯೆಟ್‌ನಲ್ಲಿ ಇದ್ದಾಗ ರುಚಿಯಾದ ತಿಂಡಿ ತಿನ್ನಬೇಕೆನಿಸಿದರೂ, ಕ್ಯಾಲೊರಿಗಳ ಭಯದಿಂದ ತಿನ್ನೋದೇ ಬೇಡ ಅನ್ನುತ್ತೇವೆ. ಆದರೆ ಸಿಹಿ ಗೆಣಸಿನಿಂದ ಮಾಡುವ ಈ ಟಿಕ್ಕಿ ಆರೋಗ್ಯಕರವೂ ಹೌದು, ಹೊಟ್ಟೆ ತುಂಬುವಂತದ್ದೂ ಆಗಿದ್ದು, ತೂಕ ನಿಯಂತ್ರಣಕ್ಕೆ ಇದು ಬೆಸ್ಟ್.

ಬೇಕಾಗುವ ಪದಾರ್ಥಗಳು

ಸಿಹಿ ಗೆಣಸು – 2 ದೊಡ್ಡದು
ಬೇಯಿಸಿದ ಆಲೂಗಡ್ಡೆ – 1
ಹಸಿ ಮೆಣಸಿನಕಾಯಿ – 2 (ಸಣ್ಣವಾಗಿ ಕತ್ತರಿಸಿ)
ಶುಂಠಿ ತುರಿ – 1 ಚಮಚ
ಜೀರಿಗೆ ಪುಡಿ – 1/2 ಚಮಚ
ಗರಂ ಮಸಾಲೆ – 1/2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಅಕ್ಕಿ ಹಿಟ್ಟು ಅಥವಾ ಗೋಧಿ ಹಿಟ್ಟು – 2 ಚಮಚ
ಎಣ್ಣೆ – ಸ್ವಲ್ಪ

ಮಾಡುವ ವಿಧಾನ

ಸಿಹಿ ಗೆಣಸುಗಳನ್ನು ಚೆನ್ನಾಗಿ ಬೇಯಿಸಿ, ಸಿಪ್ಪೆ ತೆಗೆದು ಮ್ಯಾಶ್ ಮಾಡಿ. ಅದಕ್ಕೆ ಬೇಯಿಸಿದ ಆಲೂಗಡ್ಡೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ಹಸಿ ಮೆಣಸಿನಕಾಯಿ, ಶುಂಠಿ, ಜೀರಿಗೆ ಪುಡಿ, ಗರಂ ಮಸಾಲೆ, ಉಪ್ಪು, ಕೊತ್ತಂಬರಿ ಸೇರಿಸಿ ಮಿಶ್ರಣ ಮಾಡಿ. ಅಕ್ಕಿ ಹಿಟ್ಟು ಅಥವಾ ಗೋಧಿ ಹಿಟ್ಟು ಸೇರಿಸಿ ಗಟ್ಟಿಯಾದ ಮಿಶ್ರಣ ತಯಾರಿಸಿ. ಈಗ ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ, ಒತ್ತಿ ಟಿಕ್ಕಿ ಆಕಾರ ಕೊಡಿ.

ತವಾದಲ್ಲಿ ಸ್ವಲ್ಪ ಎಣ್ಣೆ ಹಾಕಿ, ಎರಡೂ ಬದಿಯಲ್ಲಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ಈಗ ಬಿಸಿ ಬಿಸಿ ಸಿಹಿ ಗೆಣಸು ಟಿಕ್ಕಿಯನ್ನು ಹಸಿರು ಚಟ್ನಿ ಅಥವಾ ಮೊಸರಿನೊಂದಿಗೆ ಸವಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !