September 28, 2026
Monday, September 28, 2026
spot_img

FOOD | ನಿಮ್ಮ ಅಡುಗೆಮನೆ ಪೂರ್ತಿ ಘಮ್ ಅನ್ನುತ್ತೆ ಈ ಕೊತ್ತಂಬರಿ ಸೊಪ್ಪಿನ ರಸಂ ಮಾಡಿದ್ರೆ

ಮಧ್ಯಾಹ್ನದ ಊಟದಲ್ಲಿ ತುಪ್ಪದ ಜೊತೆ ಬಿಸಿ ಅನ್ನಕ್ಕೆ ರಸಂ ಇದ್ದರೆ ಊಟದ ಸವಿಗೆ ಮತ್ತಷ್ಟು ರುಚಿ ಬರುತ್ತದೆ. ಅದರಲ್ಲೂ ಕೊತ್ತಂಬರಿ ಸೊಪ್ಪಿನಿಂದ ಮಾಡುವ ರಸಂ ಆರೋಗ್ಯಕರವೂ, ಸಿಹಿ-ಖಾರ-ಹುಳಿ ರುಚಿಯ ಈ ರಸಂ ಒಮ್ಮೆ ಟ್ರೈ ಮಾಡ್ಲೇಬೇಕು.

ಬೇಕಾಗುವ ಪದಾರ್ಥಗಳು:

ಕೊತ್ತಂಬರಿ ಸೊಪ್ಪು – ಒಂದು ಕಪ್
ಟೊಮೇಟೊ – 1
ಹುಣಸೆಹಣ್ಣು ರಸ – ಸಣ್ಣ ಲಿಂಬೆ ಗಾತ್ರ
ಬೆಳ್ಳುಳ್ಳಿ – 3-4 ಎಸಳು
ಜೀರಿಗೆ – 1 ಚಮಚ
ಮೆಣಸು – 1/2 ಚಮಚ
ಅರಿಶಿಣ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ತುಪ್ಪ/ಎಣ್ಣೆ – 1 ಚಮಚ
ಸಾಸಿವೆ, ಕರಿಬೇವು – ಒಗ್ಗರಣೆಗೆ

ಮಾಡುವ ವಿಧಾನ:

ಮೊದಲು ಕೊತ್ತಂಬರಿ ಸೊಪ್ಪು, ಜೀರಿಗೆ, ಮೆಣಸು ಮತ್ತು ಬೆಳ್ಳುಳ್ಳಿಯನ್ನು ಒಟ್ಟಿಗೆ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಒಂದು ಪಾತ್ರೆಯಲ್ಲಿ ತುಪ್ಪ ಅಥವಾ ಎಣ್ಣೆ ಹಾಕಿ ಸಾಸಿವೆ, ಕರಿಬೇವು ಒಗ್ಗರಣೆ ಮಾಡಿ.

ನಂತರ ಸಣ್ಣದಾಗಿ ಕತ್ತರಿಸಿದ ಟೊಮೇಟೊ ಹಾಕಿ ಚೆನ್ನಾಗಿ ಬೇಯಿಸಬೇಕು. ಈಗ ಹುಣಸೆ ರಸ, ಅರಿಶಿಣ, ಉಪ್ಪು ಸೇರಿಸಿ ಕುದಿಯಲು ಬಿಡಿ.

ಕುದಿಯಲು ಶುರುವಾದ ಮೇಲೆ ರುಬ್ಬಿದ ಕೊತ್ತಂಬರಿ ಮಿಶ್ರಣವನ್ನು ಸೇರಿಸಿ ಸ್ವಲ್ಪ ಹೊತ್ತು ಮಾತ್ರ ಕುದಿಸಿ. ಹೆಚ್ಚು ಕುದಿಸಬಾರದು, ಇಲ್ಲವಾದರೆ ಪರಿಮಳ ಕಡಿಮೆಯಾಗುತ್ತದೆ. ಕೊನೆಗೆ ಬಿಸಿ ಬಿಸಿ ರಸಂ ಅನ್ನು ಅನ್ನದ ಜೊತೆ ಸವಿಯಿರಿ.

Must Read