ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಮಕ್ಕಳಲ್ಲೂ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಹೊರಗಿನ ಚಾಟ್ಸ್ ತಿಂದರೆ ಸಾಕು ಮತ್ತೆ ಮೂರು ದಿನ ಹೊಟ್ಟೆ ಕೆಡುತ್ತೆ. ಹೀಗಿರುವಾಗ ನಮ್ಮ ಆರೋಗ್ಯ ಯಾವ ರೀತಿ ಕಾಪಾಡಿಕೊಳ್ಳೋದು ಅಂತ ನೋಡಿ.. ಈ ಆಹಾರ ಸೇವಿಸಿ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಪಾರಾಗಬಹುದು…
- ಹೆಚ್ಚು ನೀರು ಕುಡಿಯುವುದರಿಂದ ಗ್ಯಾಸ್ಟ್ರಿಕ್ ಕಡಿಮೆಯಾಗುತ್ತೆ.
- ಸ್ಟ್ರಾಬೆರಿ, ಬ್ಲುಬೆರಿ, ಗ್ರೇಪ್ ಸೇರಿ ಹಲವು ಕಡಿಮೆ ಸಕ್ಕರೆ ಅಂಶ ಇರುವ ಹಣ್ಣು ಸೇವಿಸಿ.
- ಟೊಮಾಟೋ, ಕ್ಯಾರೆಟ್, ಬೀನ್ಸ್ ಸೇರಿ ಹಸಿರು ತರಕಾರಿಯಿಂದ ಗ್ಯಾಸ್ಟ್ರಿಕ್ ಮುಕ್ತರಾಗಬಹುದು.
- ಗೋಧಿ, ಆಲೂಗಡ್ಡೆ ಬದಲಿಗೆ ಅನ್ನ ಸೇವಿಸೋದು ಉತ್ತಮ.
- ಕಾಫಿ ಬದಲಿಗೆ ಟೀ ಕುಡಿಯಿರಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
- ಓಮ್ ಕಾಳು/ ಅಜ್ವೈನ್ ನಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
- ಊಟದ ಬಳಿಕ ಸೋಂಪು ಸೇವಿಸುವುದು ಉತ್ತಮ.
- ಯೋಗರ್ಟ್ ಸೇವಿಸುವುದರಿಂದ ಕರಳು ಆರೋಗ್ಯಕರವಾಗಿರುತ್ತೆ.
- ಜೇನುತುಪ್ಪ ಸೇವಿಸುವುದರಿಂದ ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಕಡಿಮೆಯಾಗುತ್ತೆ.