ಗಂಡು ಮಗುವಿಗೆ ಜನ್ಮ ನೀಡಿದ ಸೋನಂ ಕಪೂರ್

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಉದ್ಯಮಿ ಆನಂದ್ ಅಹುಜಾ ಜೊತೆ 2018ರಲ್ಲಿ ಸಪ್ತಪದಿ ತುಳಿದಿದ್ದ ಬಾಲಿವುಡ್ ಬೆಡಗಿ, ಅನಿಲ್ ಕಪೂರ್ ಮಗಳು ಸೋನಂ ಕಪೂರ್​ ಇಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತೋಷದ ವಿಷಯವನ್ನು ಇನ್​ಸ್ಟಾಗ್ರಾಮ್​ ಮೂಲಕ ಬಹಿರಂಗಪಡಿಸಿದ್ದಾರೆ. ಸೋನಂ ಕಪೂರ್ ಅವರ ತಾಯಿ ಸುನೀತಾ ಕಪೂರ್ ಅವರು ಸಹ ಈ ವಿಷಯ ಹಂಚಿಕೊಂಡಿದ್ದಾರೆ.
20.08.2022 ರಂದು, ನಾವು ನಮ್ಮ ಸುಂದರ ಗಂಡು ಮಗುವನ್ನು ತಲೆಬಾಗಿ ಮತ್ತು ಹೃದಯದಿಂದ ಸ್ವಾಗತಿಸಿದ್ದೇವೆ. ಬೆಂಬಲ ನೀಡಿದ ಎಲ್ಲ ವೈದ್ಯರು, ದಾದಿಯರು, ಸ್ನೇಹಿತರು ಮತ್ತು ಕುಟುಂಬಕ್ಕೆ ಧನ್ಯವಾದಗಳು.ಇದರಿಂದ ನಮ್ಮ ಜೀವನವು ಶಾಶ್ವತವಾಗಿ ಬದಲಾಗಿದೆ ಎಂದು ಸೋನಂ ಕಪೂರ್​​ ಬರೆದುಕೊಂಡಿದ್ದಾರೆ.
ಅನಿಲ್ ಕಪೂರ್​ ಸಂಭ್ರಮ
ಮಗಳು ಮುದ್ದಾದ ಮಗುವಿಗೆ ಜನ್ಮ ನೀಡಿರುವ ವಿಷಯ ಗೊತ್ತಾಗುತ್ತಿದ್ದ ನಟ ಅನಿಲ್ ಕಪೂರ್​ ಸಂಭ್ರಮಿಸಿದ್ದು,ನಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ಇದರಿಂದ ಸಂತೋಷವಾಗಿದೆ ಎಂದಿದ್ದಾರೆ. ಸೋನಂ ಮತ್ತು ಆನಂದ್ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಇನ್​​​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!