September 26, 2026
Saturday, September 26, 2026
spot_img

ಜಿಮ್ ಫ್ರೀಕ್ಸ್ & ಕಿಡ್ಸ್ ಸ್ಪೆಷಲ್: ಸಖತ್ ಟೇಸ್ಟಿ, ಸೂಪರ್ ಹೆಲ್ದಿ ಚಾಕೊಲೇಟ್ ಬನಾನಾ ಸ್ಮೂಥಿ!

ಬೆಳಿಗ್ಗೆ ಎದ್ದ ತಕ್ಷಣ ತಿನ್ನೋಕೆ ಟೈಮ್ ಇಲ್ವಾ? ಇಲ್ಲಾ ಅಂದ್ರೆ ಸಂಜೆ ಜಿಮ್ ಮುಗಿಸಿ ಬಂದ್ಮೇಲೆ ಬಾಡಿಗೆ ಫುಲ್ ಎನರ್ಜಿ ಬೇಕಾ? ಹಾಗಿದ್ರೆ ಈ ಚಾಕೊಲೇಟ್ ಬನಾನಾ ಸ್ಮೂಥಿ ಟ್ರೈ ಮಾಡಿ:

ಹಣ್ಣಾದ ಬಾಳೆಹಣ್ಣು:

ಕೋಕೋ ಪೌಡರ್

ಹಾಲು

ಜೇನುತುಪ್ಪ ಅಥವಾ ಬೆಲ್ಲ

ಪೀನಟ್ ಬಟರ್

ಐಸ್ ಕ್ಯೂಬ್ಸ್

ಡ್ರೈ ಫ್ರೂಟ್ಸ್

ಮೊದಲಿಗೆ ಬಾಳೆಹಣ್ಣಿನ ಸಿಪ್ಪೆ ಸುಲಿದು ಸಣ್ಣ ಚೂರುಗಳಾಗಿ ಕಟ್ ಮಾಡಿ ಮಿಕ್ಸಿ ಜಾರ್‌ಗೆ ಹಾಕಿ. ಅದೇ ಜಾರ್‌ಗೆ ಕೋಕೋ ಪೌಡರ್, ಜೇನುತುಪ್ಪ, ಪೀನಟ್ ಬಟರ್ ಮತ್ತು ಹಾಲು ಹಾಗೂ ಐಸ್ ಕ್ಯೂಬ್ಸ್ ಸೇರಿಸಿ. ಮಿಕ್ಸಿಯಲ್ಲಿ ಎಲ್ಲವನ್ನೂ ಚೆನ್ನಾಗಿ ಗ್ರೈಂಡ್ ಮಾಡಿಕೊಳ್ಳಿ. ಕ್ರೀಮಿಯಾಗಿ ಬರುವವರೆಗೆ ಗ್ರೈಂಡ್ ಮಾಡಿ.

ಈಗ ಗ್ಲಾಸ್‌ಗೆ ಸ್ವಲ್ಪ ಚಾಕೊಲೇಟ್ ಸಿರಪ್‌ನಿಂದ ಡೆಕೋರೇಟ್ ಮಾಡಿ, ತಯಾರಿಸಿದ ಸ್ಮೂತಿಯನ್ನು ಹಾಕಿ. ಮೇಲೆ ಸ್ವಲ್ಪ ಹೆಚ್ಚಿದ ಬಾದಾಮಿ-ಗೋಡಂಬಿ ಚೂರುಗಳನ್ನು ಹಾಕಿ ತಣ್ಣಗೆ ಕುಡಿಯಿರಿ.

ಇದು ಬರೀ ಟೇಸ್ಟ್ ಅಷ್ಟೇ ಅಲ್ಲ, ದಿನವಿಡೀ ಎನರ್ಜಿಯಾಗಿರಲು ಸೂಪರ್ ಹೆಲ್ತಿ ಡ್ರಿಂಕ್!

Must Read