ಮೊದಲ ಬಾರಿಗೆ ಕೇಂದ್ರ ಸರ್ಕಾರದಿಂದ ‘ನ್ಯಾಷನಲ್​ ಕ್ರಿಯಟರ್ಸ್​ ಅವಾರ್ಡ್’ ಪ್ರದಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೊದಲ ಬಾರಿಗೆ ಕೇಂದ್ರ ಸರ್ಕಾರದ ವತಿಯಿಂದ ಸೋಶಿಯಲ್​ ಮೀಡಿಯಾ ಕಂಟೆಂಟ್​ ಕ್ರಿಯೇಟರ್​ಗಳಿಗೆ ‘ನ್ಯಾಷನಲ್​ ಕ್ರಿಯಟರ್ಸ್​ ಅವಾರ್ಡ್’ ಪ್ರದಾನ ಮಾಡಲಾಗಿದೆ.

ದೆಹಲಿಯ ಭಾರತ ಮಂಟಪಂದಲ್ಲಿ ಪ್ರಧಾನಿ ಮೋದಿ ಅವರ ಪ್ರಶಸ್ತಿಗಳನ್ನು ವಿತರಿಸಿ, ಅಭಿನಂದಿಸಿದರು.

ಉತ್ತಮ ಕಥೆಗಾರ, ದಿ ಡಿಸ್ರುಪ್ಟರ್​, ಸೆಲೆಬ್ರಿಟಿ ಕ್ರಿಯೇಟರ್, ಗ್ರೀನ್​ ಚಾಂಪಿಯನ್​, ಸಾಮಾಜಿಕ ಬದಲಾವಣೆಗೆ ಅತ್ಯುತ್ತಮ ಕ್ರಿಯೇಟರ್​, ಅತ್ಯಂತ ಪ್ರಭಾವಶಾಲಿ ಕೃಷಿ ಕ್ರಿಯೇಟರ್​, ಸಾಂಸ್ಕೃತಿಕ ರಾಯಭಾರಿ, ಬೆಸ್ಟ್​ ಟ್ರಾವೆಲ್​ ಕ್ರಿಯೇಟರ್​, ಸ್ವಚ್ಛತಾ ರಾಯಭಾರಿ, ನ್ಯೂ ಇಂಡಿಯನ್​ ಚಾಂಪಿಯನ್​, ಟೆಕ್​ ಕ್ರಿಯೇಟರ್​, ಹೆರಿಟೇಜ್​ ಫ್ಯಾಶನ್​, ಮೋಸ್ಟ್​ ಕ್ರಿಯೇಟಿವ್​​ ಕ್ರಿಯೇಟರ್​ (ಪುರುಷ ಮತ್ತು ಮಹಿಳೆ), ದಿ ಬೆಸ್ಟ್​ ಕ್ರಿಯೇಟರ್​ ಇನ್​ ಫುಡ್​ ಕೆಟಗರಿ, ದಿ ಬೆಸ್ಟ್​ ಕ್ರಿಯೇಟರ್​ ಇನ್​ ಎಜುಕೇಶನ್​ ಮತ್ತು ಇಂಟರ್ನ್ಯಾಷನಲ್​ ಕ್ರಿಯೇಟರ್​ ಅವಾರ್ಡ್​ ಸೇರಿದಂತೆ ಒಟ್ಟು 20 ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಯಿತು.

ಪ್ರಶಸ್ತಿ ವಿಜೇತರ ಪಟ್ಟಿ
ಇಂದು ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಪ್ರೇರಕ ಭಾಷಣಕಾರ ಜಯ ಕಿಶೋರಿ, ಅಮೇರಿಕನ್ ಯೂಟ್ಯೂಬರ್ ಡ್ರೂ ಹಿಕ್ಸ್ ಸೇರಿದಂತೆ ಹಲವಾರು ಸೋಶಿಯಲ್​ ಮೀಡಿಯಾ ಇನ್ಫ್ಯುಯೆನ್ಸರ್​ಗಳಿಗೆ ಪ್ರಶಸ್ತಿಗಳನ್ನು ನೀಡಿದರು.

* ಜಯ ಕಿಶೋರಿಗೆ ಸಾಮಾಜಿಕ ಬದಲಾವಣೆಗಾಗಿ ಅತ್ಯುತ್ತಮ ಕ್ರಿಯೇಟರ್​ ಅವಾರ್ಡ್​ ನೀಡಲಾಯಿತು
* ಕಬಿತಾ ಸಿಂಗ್​ (Kabita’s Kitchen) ಅವರಿಗೆ ಆಹಾರ ವಿಭಾಗದಲ್ಲಿ ಉತ್ತಮ ಕ್ರಿಯೇಟರ್ ಪ್ರಶಸ್ತಿ
* ಡ್ರೂ ಹಿಕ್ಸ್ ಅವರಿಗೆ ಅತ್ಯುತ್ತಮ ಇಂಟರ್ನ್ಯಾಷನಲ್​ ಕ್ರಿಯೇಟರ್​ ಅವಾರ್ಡ್​
* ಕಾಮಿಯಾ ಜೈನ್​ ಅವರಿಗೆ ಅತ್ಯುತ್ತಮ ಟ್ರಾವೆಲ್​ ಕ್ರಿಯೇಟರ್​ ಅವಾರ್ಡ್​
* ರಣವೀರ್​ ಅಲ್ಲಾಬಾಡಿಯಾ (ಬೀರ್​ ಬೈಸಿಪ್ಸ್​) ಅವರಿಗೆ ಡಿಸ್ರುಪ್ಟರ್​ ಆಫ್​ ದಿ ಇಯರ್​ ಅವಾರ್ಡ್​
* ಆರ್​ಜೆ ರೌನಾಕ್​ (Bauaa) ಅವರಿಗೆ ಮೋಸ್ಟ್​ ಕ್ರಿಯೆಟಿವ್​ ಕ್ರಿಯೆಟರ್ (ಪುರುಷ)​ ಅವಾರ್ಡ್​
* ಕರ್ನಾಟಕದ ಶ್ರದ್ಧಾ ಜೈನ್​ ಅವರಿಗೆ ಮೋಸ್ಟ್​ ಕ್ರಿಯೇಟಿವ್​ ಕ್ರಿಯೇಟರ್ (ಮಹಿಳೆ)​ ಅವಾರ್ಡ್​
* ಅರಿದಮ್ಯಾನ್​ ಅವರಿಗೆ ಬೆಸ್ಟ್​ ಮೈಕ್ರೋ ಕ್ರಿಯೇಟರ್​ ಅವಾರ್ಡ್​
* ನಿಶ್ಚಯ್​ ಅವರಿಗೆ ಬೆಸ್ಟ್​ ಕ್ರಿಯೇಟರ್ ಇನ್​ ಗೇಮಿಂಗ್​ ಕೆಟಗರಿ ಅವಾರ್ಡ್​
* ಅಂಕಿತ್​ ಬೈಯನಪುರಿಯಾಗೆ ಬೆಸ್ಟ್​ ಹೆಲ್ತ್​ ಆಯಂಡ್​ ಫಿಟ್​ನೆಸ್​ ಕ್ರಿಯೇಟರ್​ ಅವಾರ್ಡ್​
* ನಮನ್​ ದೇಶ್​ಮುಖ್​ಗೆ ಬೆಸ್ಟ್​ ಕ್ರಿಯೇಟರ್‌ಇನ್​ ಎಜುಕೇಶನ್​ ಕೆಟಗರಿ ಅವಾರ್ಟ್​
* ಜಾನ್ಹವಿ ಸಿಂಗ್​ಗೆ ಹೆರಿಟೇಜ್​ ಫ್ಯಾಶನ್​ ಐಕಾನ್​ ಅವಾರ್ಡ್​
* ಮಲ್ಹಾರ್​ ಕಲಂಬೆ ಅವರಿಗೆ ಸ್ವಚ್ಛತಾ ರಾಯಭಾರಿ ಪ್ರಶಸ್ತಿ
* ಗೌರವ್​ ಚೌಧರಿಗೆ ಬೆಸ್ಟ್​ ಕ್ರಿಯೇಟರ್ ಇನ್​ ಟೆಕ್​ ಕೆಟಗರಿ ಅವಾರ್ಡ್​
* ಮೈಥಿಲಿ ಠಾಕೂರ್​ಗೆ ವರ್ಷದ ಸಾಂಸ್ಕೃತಿಕ ರಾಯಭಾರಿ ಪ್ರಶಸ್ತಿ
* ಪಂಕ್ತಿ ಪಾಂಡೆಗೆ ಫೇವರಿಟ್​ ಗ್ರೀನ್​ ಚಾಂಪಿಯನ್​ ಅವಾರ್ಡ್​
* ಕೀರ್ತಿಕಾ ಗೋವಿಂದಸ್ವಾಮಿಗೆ ಅತ್ಯುತ್ತಮ ಕತೆಗಾರ ಪ್ರಶಸ್ತಿ
* ಅಮನ್​ ಗುಪ್ತಗೆ ಸೆಲೆಬ್ರಿಟಿ ಕ್ರಿಯೇಟರ್​ ಅವಾರ್ಡ್​

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!