ಪುತ್ರನ ವಿವಾಹ ಮಹೋತ್ಸವಕ್ಕೆ ಸಿ.ಎಂ. ಬೊಮ್ಮಾಯಿಗೆ ಆಹ್ವಾನ ನೀಡಿದ ಶಾಸಕ ಸೋಮಲಿಂಗಪ್ಪ

ಹೊಸ ದಿಗಂತ ವರದಿ, ಬಳ್ಳಾರಿ:

ಸಿ.ಎಂ.ಬಸವರಾಜ್ ಬೊಮ್ಮಾಯಿ ಅವರನ್ನು, ಪುತ್ರ ಎಂ.ಎಸ್.ಸಿದ್ದಪ್ಪ ಅವರ ವಿವಾಹ ಮಹೋತ್ಸವಕ್ಕೆ ಸಿರಗುಪ್ಪ ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರು ಆಹ್ವಾನಿಸಿದರು. ಬೆಂಗಳೂರು ‌ನಗರದಲ್ಲಿ ಸಿ.ಎಂ.ಅವರನ್ನು ಭೇಟಿ ಮಾಡಿದ ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರು, ಪುತ್ರನ ವಿವಾಹ ಮಹೋತ್ಸವಕ್ಕೆ ಆಗಮಿಸಿ ನೂತನ ವಧುವರನಿಗೆ ಆರ್ಶಿವಾದಿಸಬೇಕು ಎಂದು ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು. ಫೆ.6ರಂದು ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಪುತ್ರನ ವಿವಾಹ ನೆರವೇರಲಿದ್ದು, ಅದೇ ದಿನಂದು ಸುಮಾರು ಜನರ ಸಾಮೋಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸುಮಾರು ದಂಪತಿಗಳು ನೂತನ ದಾಂಪತ್ಯಕ್ಕೆ ಕಾಲಿಡಲಿದ್ದಾರೆ. ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಆಗಮಿಸಿ ನೂತನ ವಧುವರರಿಗೆ ಆರ್ಶಿವಾದಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ವಾಲ್ಮೀಕಿ ಗುರು ಪೀಠದ ಸ್ವಾಮೀಜಿ ಅವರೊಂದಿಗೆ ಆಮಂತ್ರಣ ಪತ್ರಿಕೆ ನೀಡಿದರು. ವಿವಿಧ ಮುಖಂಡರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!