ಸಾಮಾಗ್ರಿಗಳು
ಪಾಸ್ತಾ
ಕ್ಯಾಪ್ಸಿಕಂ
ಬೆಲ್ ಪೆಪ್ಪರ್ಸ್
ಮಶ್ರೂಮ್ಸ್
ಸ್ವೀಟ್ ಕಾರ್ನ್
ಹಾಲು
ಚೀಸ್
ಉಪ್ಪು
ಆರಿಗ್ಯಾನೊ
ಚಿಲ್ಲಿ ಫ್ಲೇಕ್ಸ್
ಮೈದಾಹಿಟ್ಟು ಅಥವಾ ಕಾರ್ನ್ಫ್ಲೋರ್
ಮಾಡುವ ವಿಧಾನ
ಮೊದಲು ಪಾಸ್ತಾಗೆ ನೀರು, ಎಣ್ಣೆ ಹಾಗೂ ಉಪ್ಪನ್ನು ಹಾಕಿ ಬೇಯಿಸಿಕೊಳ್ಳಿ. ಇದು ಬೆಂದ ನಂತರ ತಣ್ಣೀರಿನಲ್ಲಿ ತೊಳೆದು ಒಂದಕ್ಕೊಂದು ಅಂಟದಂತೆ ಹರಡಿ
ಆನಂತರ ಬಾಣಲೆಗೆ ಎಣ್ಣೆ ಅಥವಾ ಬೆಣ್ಣೆ ಹಾಕಿ, ನಂತರ ನಿಮಗಿಷ್ಟದ ತರಕಾರಿಗಳನ್ನು ಅರ್ಧಂಬರ್ಧ ಬೇಯಿಸಿಕೊಳ್ಳಿ
ತರಕಾರಿಯನ್ನು ಒಂದು ಪ್ಲೇಟ್ಗೆ ತೆಗೆಯಿರಿ. ಆನಂತರ ಪ್ಯಾನ್ಗೆ ಬೆಣ್ಣೆ ಹಾಕಿ, ಒಂದು ಸ್ಪೂನ್ ಕಾರ್ನ್ಫ್ಲೋರ್ ಹಾಕಿ ರೋಸ್ಟ್ ಮಾಡಿ
ನಂತರ ಹಾಲು, ಚೀಸ್, ಉಪ್ಪು, ಆರಿಗ್ಯಾನೊ, ಚಿಲ್ಲಿ ಫ್ಲೇಕ್ಸ್ ಹಾಕಿ, ಸಣ್ಣ ಉರಿಯಲ್ಲಿ ಕೈ ಆಡಿಸುತ್ತಲೇ ಇರಿ. ನಂತರ ತರಕಾರಿಗಳು ಹಾಗೂ ಪಾಸ್ತಾ ಹಾಕಿ
ಬೇಕಿದ್ದಲ್ಲಿ ಮತ್ತೊಂದು ಚೀಸ್ ಸ್ಲೈಸ್ ಹಾಕಿಕೊಂಡ್ರೆ ನಿಮ್ಮ ವೈಟ್ ಸಾಸ್ ಕ್ರೀಮಿ ಪಾಸ್ತಾ ರೆಡಿ



